ಅರಬೀ ಸಮುದ್ರದಲ್ಲಿ ಭಾರೀ ತೂಫಾನ್; ಮೀನುಗಾರಿಕೆಗೆ ನಿರ್ಬಂಧ

Prasthutha|

ಮಂಗಳೂರು: ಅರಬೀ ಸಮುದ್ರದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

- Advertisement -


ಗಂಟೆಗೆ 40-60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಕಾರಣ ಸಮುದ್ರದಲ್ಲಿ ಭಾರೀ ಎತ್ತರದಲ್ಲಿ ಅಲೆಗಳು ಏಳಲಿದ್ದು, ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.


ಉಡುಪಿ, ಮಂಗಳೂರು, ಉತ್ತರಕನ್ನಡ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ತುಂಬಾ ಅಪಾಯಕಾರಿ ಅಲೆಗಳು ಅಪ್ಪಳಿಸಲಿವೆ ಎಂದು ತಿಳಿಸಿದೆ.

- Advertisement -


ಮಂಗಳೂರು, ಮಲ್ಪೆ, ಸುರತ್ಕಲ್, ಪಣಂಬೂರು,ಉಡುಪಿ, ಕಾರವಾರ, ಗಂಗೊಳ್ಳಿ ಸಹಿತ ಎಲ್ಲಾ ಬಂದರುಗಳಿಗೆ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 10 ರ ವರೆಗೆ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.

Join Whatsapp