ಕೊಡಗಿನಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

Prasthutha|

ಮಡಿಕೇರಿ: ಕೊಡಗಿನಲ್ಲಿ ದಿಢೀರ್  ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತ ಗೊಂಡಿದ್ದು, ವಾಹನ ಸವಾರರು ಪರದಾಡುವಂತಯಿತ್ತು.

- Advertisement -

ಜಿಲ್ಲೆಯಲ್ಲಿ ಸುದಿದ ಭಾರೀ ಮಳೆಗೆ ಹಲವು ಕಡೆಗಳಲ್ಲಿ ಮರಗಳು ಧರೆಗೆ ಉರುಳಿ ಬಿದ್ದಿದ್ದು, ಪರಿಣಾಮ ಮಡಿಕೇರಿ- ಮೈಸೂರು ಸಂಚಾರ ಮಾರ್ಗ ಬಂದ್ ಆಗಿದೆ.

ಕುಶಾಲನಗರ ಸಮೀಪದ ಬೈಲುಕುಪ್ಪದಲ್ಲಿ ಮರಗಳು ಬಿದ್ದ ಪರಿಣಾಮ ಮಡಿಕೇರಿ ಹಾಗೂ ಮೈಸೂರಿನ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು. ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿ ಮೇಲೂ ಮರ ಬಿದ್ದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಹೊತ್ತು ವಾಹನ ಸಂಚಾರ ಬಂದ್ ಆಗಿದೆ.  ಇನ್ನೂ ಮರಗಳನ್ನು ಸ್ಥಳೀಯ ಜೊತೆ ಅಧಿಕಾರಿಗಳು ಸೇರಿ ತೆರವು ಗೊಳಿಸಿ  ಸಂಚಾರಕ್ಕೆ ಅನುವು ಮಾಡಿಕೊಟ್ಟರು.

- Advertisement -

ಇನ್ನೂ ಪೋನ್ನಂಪೇಟೆ ತಾಲೂಕಿನ ಗೋಣಿಕೊಪ್ಪದಲ್ಲೂ ಭಾರಿ ಗಾಳಿ , ಗುಡುಗು ಸಹಿತ ಅಬ್ಬರಿಸಿದ ಮಳೆಯಿಂದ ನಗರದಲ್ಲಿರುವ ಅಂಗಡಿ ಮುಗ್ಗಟ್ಟುಗಳ ಮೇಲ್ಛಾವಣಿ ಹಾಗೂ ನಾಮ ಫಲಕಗಳು ಬಿದ್ದವು.



Join Whatsapp