ಉಡುಪಿಯ ಕೆಲವೆಡೆ ಇಂದು ಈದುಲ್ ಫಿತ್ರ್ ಆಚರಣೆ

Prasthutha|

ಉಡುಪಿ: ಉಡುಪಿ ಜಿಲ್ಲೆಯ ಕೆಲವೆಡೆ ಇಂದು ಈದುಲ್ ಫಿತ್ರ್ ಸಂಭ್ರಮದಿಂದ ಆಚರಿಸಲಾಯಿತು.

- Advertisement -

ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನ ಅಬ್ದುಲ್ ರಶೀದ್ ನದ್ವಿ ನೇತೃತ್ವದಲ್ಲಿ ಈದ್ ನಮಾಝ್ ನೆರವೇರಿಸಲಾಗಿದ್ದು, ಮಲ್ಪೆ, ಹೂಡೆ, ಕಂಡ್ಲೂರು, ಶಿರೂರು ಸೇರಿದಂತೆ ಕೆಲವು ಮಸೀದಿಗಳಲ್ಲಿ ಆಯಾ ಜಮಾಅತ್ ನಲ್ಲಿ ಈದ್ ನಮಾಝ್ ನೆರವೇರಿದೆ.

ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಉಡುಪಿ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

- Advertisement -

ಭಟ್ಕಳದಲ್ಲೂ ಇಂದು ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಾಗುತ್ತಿದೆ.

Join Whatsapp