ಭಾರಿ ಮಳೆ ಮುನ್ನೆಚ್ಚರಿಕೆ: NDRF ನ 6 ತಂಡಗಳನ್ನು ನಿಯೋಜಿಸಿದ ತಮಿಳುನಾಡು

Prasthutha|

ಚೆನ್ನೈ: ತಮಿಳುನಾಡಿನಲ್ಲಿ ಡಿಸೆಂಬರ್ 8 ರಂದು ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ ಡಿಆರ್ ಎಫ್) ಆರು ತಂಡಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ.

- Advertisement -

ನಾಗಪಟ್ಟಣಂ, ತಾಂಜಾವೂರು, ತಿರುವರೂರು, ಕಡಲೂರು, ಮಯಿಲಾಡುತುರೈ ಮತ್ತು ಚೆನ್ನೈನಲ್ಲಿ ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗುತ್ತದೆ.

ದಕ್ಷಿಣ ಅಂಡಮಾನ್ ಸಾಗರದಲ್ಲಿ ಕಡಿಮೆ ಒತ್ತಡ ರೂಪುಗೊಂಡಿದೆ. ಆದ್ದರಿಂದ  ಇದು ಪಶ್ಚಿಮ–ವಾಯುವ್ಯದ ಕಡೆಗೆ ಚಲಿಸಿ, ಅಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ತಮಿಳುನಾಡಿನ ವಿಪತ್ತು ನಿರ್ವಹಣಾ ನಿರ್ದೇಶಕರ ವಿನಂತಿಯಂತೆ NDRF ನ ಆರು ತಂಡಗಳನ್ನು ರಾಜ್ಯದೆಲ್ಲೆಡೆ ನಿಯೋಜಿಸಲಾಗಿದೆ ಎಂದು  ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Join Whatsapp