ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ

Prasthutha|

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಶನಿವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ.

- Advertisement -


ಸಂಜೆ ಸುಮಾರು 5 ಗಂಟೆಗೆ ಸುರಿದ ಮಳೆಯು ವಾಹನ ಸಂಚಾರರಿಗೆ ಭಾರಿ ಅಡ್ಡಿ ಮಾಡಿತು. ವೀಕೆಂಡ್ ಮೂಡ್ ನಲ್ಲಿದ್ದ ಹಲವರಿಗೆ ನಿರಾಸೆ ಆಯಿತಾದರೂ, ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಖುಷಿಗೊಂಡಿದ್ದಾರೆ.

ನಗರದ ಕಾರ್ಪೋರೇಶನ್ ಸರ್ಕಲ್, ಕೆ.ಆರ್ ಮಾರ್ಕೆಟ್, ಮೆಜೆಸ್ಟಿಕ್, ಚಿಕ್ಕಪೇಟೆ, ರಾಜಾಜಿನಗರ, ಮಲ್ಲೇಶ್ವರಂ ಸೇರಿ ವಿಧಾನಸೌಧ, ಬಾಳೇಕುಂದ್ರಿ ಸರ್ಕಲ್, ಶಿವಾಜಿನಗರ ಸುತ್ತಮುತ್ತ ಭಾರಿ ಮಳೆಯಾಗಿದೆ. ಇನ್ನೆರಡು ದಿನವೂ ಗುಡುಗು ಸಹಿತ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

Join Whatsapp