ನಂದಿಬೆಟ್ಟದಲ್ಲಿ ಭಾರೀ ಭೂ ಕುಸಿತ

Prasthutha|

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣವಾದ ನಂದಿಬೆಟ್ಟದಲ್ಲಿ ಭೂ ಕುಸಿತ ಉಂಟಾಗಿದ್ದು, ರಸ್ತೆ ಸಂಪೂರ್ಣ ಬಂದ್ ಆಗಿದೆ.
ಸ್ಥಳಕ್ಕೆ ಎನ್ ಡಿಆರ್ ಎಫ್ ತಂಡ ಧಾವಿಸಿ ತೆರವು ಕಾರ್ಯದಲ್ಲಿ ತೊಡಗಿದೆ. ನಗರದ ಹೊರವಲಯದ ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂಕುಸಿತವಾಗಿ 10 ಅಡಿ ಆಳಕ್ಕೆ ಮುಖ್ಯ ರಸ್ತೆ ಕುಸಿದು ಆತಂಕಕ್ಕೆ ಕಾರಣವಾಗಿದೆ. ರಸ್ತೆ ಕುಸಿದಿರುವುದರಿಂದ ನಂದಿಬೆಟ್ಟದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ರಸ್ತೆಗೆ ಅಡ್ಡಲಾಗಿ ಬಂಡೆಗಳು ಉರುಳಿ ನಿಂತಿವೆ.ರಸ್ತೆ ಬಂದ್ ಆಗಿದ್ದರಿಂದ ನಂದಿಬೆಟ್ಟಕ್ಕೆ ಬಂದಿರುವ ಪ್ರವಾಸಿಗರನ್ನು ವಾಪಸ್ ಕಳುಹಿಸಲಾಗುತ್ತಿದೆ.

- Advertisement -


ನಂದಿಬೆಟ್ಟದ ಸುತ್ತಮುತ್ತಲ್ಲಲ್ಲಿ ಭಾರೀ ಮಳೆಯಾಗಿದ್ದು, ಮೇಲ್ಭಾಗದಿಂದ ಮಣ್ಣು ಕೊಚ್ಚಿಕೊಂಡು ಬಂದಿದೆ. ಮಳೆಯ ನೀರಿನ ಜೊತೆ ಮಣ್ಣು, ಬೃಹತ್ ಬಂಡೆ, ಮರ ಗಿಡಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇನ್ನೂ ವಿದ್ಯುತ್ ಕಂಬಗಳು ಧರೆಗೆ ಉಳಿದಿರುವ ಕಾರಣ ನಂದಿಗಿರಿಧಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಂದಿಬೆಟ್ಟದ ಚೆಕ್ ಪೋಸ್ಟ್ ನ ಸ್ವಲ್ಪ ದೂರದಲ್ಲೇ ರಸ್ತೆಗೆ ಅಡ್ಡಲಾಗಿ ಮಣ್ಣು ಶೇಖರಣೆಯಾಗಿದ್ದರಿಂದ, ಮೊದಲೇ ರೆಸಾರ್ಟ್ ಬುಕ್ ಮಾಡಿಕೊಂಡು ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಮೇಲ್ಭಾಗದಲ್ಲಿಯೇ ಸಿಲುಕಿಕೊಂಡಿದ್ದಾರೆ.


ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ್ದು, ಮಣ್ಣು ತೆರವು ಕೆಲಸದಲ್ಲಿ ನಿರತರಾಗಿದ್ದಾರೆ.

Join Whatsapp