ಮುಳಬಾಗಿಲು ಸರ್ಕಾರಿ ಶಾಲೆಯಲ್ಲಿ ನಮಾಝಿಗೆ ಅವಕಾಶ : ಮುಖ್ಯ ಶಿಕ್ಷಕಿ ಅಮಾನತು !

Prasthutha|

ಕೋಲಾರ : ಸರ್ಕಾರಿ ಶಾಲೆಯ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ನಮಾಝ್ ಮಾಡಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿ ಶಾಲಾ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲುವಿನಲ್ಲಿ ನಡೆದಿದೆ. ಮುಖ್ಯ ಶಿಕ್ಷಕಿ ಉಮಾದೇವಿಯವರು ಅಮಾನತುಗೊಂಡ ಮುಖ್ಯ ಶಿಕ್ಷಕಿಯಾಗಿದ್ದಾರೆ. ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ವರಿ ಅವರು ಅಮಾನತು ಆದೇಶ ನೀಡಿದವರಾಗಿದ್ದಾರೆ.

- Advertisement -

ಪಟ್ಟಣದ ಬಳೆಚಂಗಪ್ಪ ಸರ್ಕಾರಿ ಶಾಲೆಯ ಕೊಠಡಿಯೊಂದರಲ್ಲಿ ಜನವರಿ 21 ರಂದು ಕೆಲ ಮುಸ್ಲಿಮ್ ವಿದ್ಯಾರ್ಥಿಗಳು ನಮಾಝ್​ ಮಾಡಿದ ವೀಡಿಯೋ ಒಂದು ವೈರಲ್ ಆಗಿತ್ತು. ಈ ಕುರಿತು ಕೆಲ ಹಿಂದುತ್ವ ಸಂಘಟನೆಗಳು ಪ್ರತಿಭಟನೆ ನಡೆಸಿ ಪರಿಸರದಲ್ಲಿ ಶಾಂತಿ ಕದಡಲು ಪ್ರಯತ್ನ ನಡೆಸಿದ್ದವು. ಶಾಲಾ ಪರಿಸರಕ್ಕೆ ಬಂದಿದ್ದ ಈ ಶಕ್ತಿಗಳು ಶಾಲಾ ಮುಖ್ಯ ಶಿಕ್ಷಕಿ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದವು. ಆ ಬಳಿಕ ಸ್ಥಳಕ್ಕೆ ಬಂದ ಡಿವೈಎಸ್​ಪಿ ಗಿರಿ ಅವರು ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ, ಘಟನೆಯ ಕುರಿತು  ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಇದೀಗ ಬಿಇಓ ಗಿರಿಜೇಶ್ವರಿ ಅವರು ಶಾಲಾ ಮುಖ್ಯ ಶಿಕ್ಷಕಿ ಉಮಾದೇವಿಯವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.



Join Whatsapp