ಇಂಡಿಯನ್ ಸೋಶಿಯಲ್ ಫೋರಮ್ ನಿಂದ ಗಣರಾಜ್ಯೋತ್ಸವ

Prasthutha|

ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿ ರಿಯಾದ್ ವತಿಯಿಂದ 73ನೇ ಗಣರಾಜ್ಯೋತ್ಸವ ಸಮಾರಂಭವು ರಿಯಾದ್ ನ ಅಲ್ ಮಾಸ್ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು.

- Advertisement -


ರಿಯಾದ್ ನ ವಿವಿಧ ಭಾಗಗಳಿಂದ ಅನಿವಾಸಿ ಭಾರತೀಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ಕಾರ್ಯಕ್ರಮವನ್ನು ಐಕ್ಯಗಾನ ನುಡಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಇಂಡಿಯನ್ ಸೋಶಿಯಲ್ ಫೋರಂ ಕೇಂದ್ರ ಸಮಿತಿ ರಿಯಾದ್ ನ ಉಪಾಧ್ಯಕ್ಷ ಮುಸ್ತಾಕ್ ಖಾಸಿಮ್ ಉದ್ಘಾಟಿಸಿ ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿರಾಜ್ ಸಜಿಪ ಮಾತನಾಡಿ, ಇಂಡಿಯನ್ ಸೋಶಿಯಲ್ ಫೋರಂ ಸೌದಿ ಅರೇಬಿಯಾದಲ್ಲಿ ಹಲವಾರು ವರ್ಷಗಳಿಂದ ಅನಿವಾಸಿ ಭಾರತೀಯರ ಸೇವೆಯಲ್ಲಿ ತೊಡಗಿದ್ದು, ಎಲ್ಲರೂ ಅನಿವಾಸಿ ಭಾರತೀಯರ ಸಂಕಷ್ಟ ನಿವಾರಿಸಲು ಇಂಡಿಯನ್ ಸೋಶಿಯಲ್ ಫೋರಂನೊಂದಿಗೆ ಕೈ ಜೋಡಿಸಲು ಕರೆ ನೀಡಿದರು.

- Advertisement -


ದಿಕ್ಕೂಚಿ ಭಾಷಣ ಮಾಡಿದ ಇಂಡಿಯನ್ ಸೋಶಿಯಲ್ ಫೋರಂ ರಾಜ್ಯ ಸಮಿತಿ ಸದಸ್ಯ ಶರೀಫ್ ಕಬಕ, ದೇಶವು ಗಣರಾಜ್ಯವಾಗಿ 72 ವರ್ಷ ಕಳೆದರೂ ಸಂವಿಧಾನದ ಮೌಲ್ಯಗಳನ್ನು ಫ್ಯಾಶಿಸ್ಟ್ ವರ್ಗವು ನಾಶಪಡಿಸುತ್ತಿದ್ದು ಈ ದೇಶದ ಎಲ್ಲಾ ವರ್ಗದ ಜನರ ಸರ್ವತೋಮುಖ ಕಲ್ಯಾಣಕ್ಕಾಗಿ ನಾವೆಲ್ಲರೂ ಪರಸ್ಪರ ಭಿನ್ನಾಭಿಪ್ರಾಯ ಮರೆತು ಹೋರಾಟ ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಮುಖ್ಯ ಅತಿಥಿಗಳಾಗಿ ಇಂಡಿಯನ್ ಫೆಟರ್ನಿಟಿ ಫೋರಂ ರಿಯಾದ್ ಕರ್ನಾಟಕದ ಅಧ್ಯಕ್ಷ ತಾಜುದ್ದೀನ್, ಖಿದ್ಮ ಫೌಂಡೇಶನ್ ರಿಯಾದ್ ನ ಅಧ್ಯಕ್ಷ ಫಝ್ಲು ರಹ್ಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಂಡಿಯನ್ ಸೋಶಿಯಲ್ ಫೋರಂ ನಸ್ರಿಯಾ ಬ್ಲಾಕ್ ಅಧ್ಯಕ್ಷರಾದ ಮಹಮ್ಮದ್ ಮುಲ್ಕಿ ಸ್ವಾಗತಿಸಿದರು. ಅಬುಬಕ್ಕರ್ ಸಿದ್ದೀಕ್ ಕಾರ್ಯಕ್ರಮ ನಿರೂಪಿಸಿದರೆ ರಾಜ್ಯ ಕಾರ್ಯದರ್ಶಿಯಾದ ಜವಾದ್ ಬಸ್ರೂರು ಧನ್ಯವಾದ ಸಮರ್ಪಿಸಿದರು.

Join Whatsapp