ತನ್ನ ಮಗನನ್ನು ಬೆಳೆಸಲು ಮತ್ತೊಬ್ಬ ಮಗನನ್ನು ಮುಗಿಸಿದ್ರು: ಡಿಕೆಶಿ ವಿರುದ್ಧ ಕುಮಾರಸ್ವಾಮಿ ಕಿಡಿ

Prasthutha|

ದೆಹಲಿ: ತನ್ನ ಮಗನನ್ನು ಬೆಳೆಸಲು ಮತ್ತೊಬ್ಬ ಮಗನನ್ನು ಮುಗಿಸಿದರು. ಮನುಷ್ಯನ ಅವನು. ರಾಜಕೀಯ ಮಾಡಿದರೆ ಗಂಡಸ್ತನದ ರಾಜಕೀಯ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

- Advertisement -


ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಕುಟುಂಬದ ವಿರುದ್ಧ ಮಾತಾಡ್ತಾರಾ. 10 ತಿಂಗಳಲ್ಲಿ ಸರ್ಕಾರ ಬೀಳಿಸಲು ಸಂಚು ಎಂದು ಶಿವಕುಮಾರ್ ಆರೋಪ ಮಾಡಿದ್ದಾರೆ.

ಸರ್ಕಾರ ಬೀಳಿಸಲು ಟ್ರೈಮಾಡಿದ್ದಾರೆಂದು ಅಜ್ಜಯ್ಯ ಹೇಳಿದ್ರಾ? ಸುಮ್ಮನೆ ನನ್ನನ್ನು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಅಕ್ರಮ ನಡೆದರೆ ಒಂದು ದಾಖಲೆ ನೀಡಿದ್ದರಾ? ನಾನು ವಿರೋಧ ಪಕ್ಷದ ನಾಯಕನಿದ್ದಾಗ ಬಿಜೆಪಿ ವಿರುದ್ಧ ಹೋರಾಟ ಮಾಡಿದೆ. ನಾಲ್ಕೈದು ಕೇಸ್ ದಾಖಲಿಸುವ ಕೆಲಸ ಮಾಡಿದರು. ಲೋಕಾಯುಕ್ತ ಕೇಸ್ ಬಿಜೆಪಿ ಕಾಲದಲ್ಲಿ ಹಾಕಿದ್ದು, ಇದರಲ್ಲಿ ನನ್ನ ಮೇಲೆ ಏನು ಆಪಾದನೆ ಇದೆ ಇಲ್ಲಿ ಎಂದರು.



Join Whatsapp