ನೀರಜ್ ಜೊತೆಗಿನ ಪೈಪೋಟಿ ಭಾರತ, ಪಾಕ್ ಯುವಕರಲ್ಲಿ ಕ್ರೀಡಾ ಮನೋಭಾವವನ್ನು ಹುರಿದುಂಬಿಸಲಿದೆ: ಅರ್ಷದ್ ನದೀಂ

Prasthutha|

ಪ್ಯಾರಿಸ್: ಉಭಯ ದೇಶಗಳ ನಡುವಣ ಕ್ರಿಕೆಟ್ ಪ್ರತಿಸ್ಪರ್ಧೆಯಂತೆಯೇ ಭಾರತದ ನೀರಜ್ ಚೋಪ್ರಾ ಹಾಗೂ ತಮ್ಮ ನಡುವಿನ ಪೈಪೋಟಿಯು ಚರ್ಚೆಯಾಗುತ್ತಿದೆ. ಇದು ಎರಡೂ ದೇಶಗಳ ಯುವಕರಲ್ಲಿ ಕ್ರೀಡಾ ಮನೋಭಾವವನ್ನು ಹುರಿದುಂಬಿಸಲಿದೆ ಎಂದು ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಂ ಹೇಳಿದ್ದಾರೆ.

- Advertisement -


ಪ್ಯಾರಿಸ್ ಒಲಿಂಪಿಕ್ಸ್ ನ ಚಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.


‘ಕ್ರಿಕೆಟ್ ಪಂದ್ಯಗಳು ಅಥವಾ ಇತರ ಕ್ರೀಡೆಗಳ ಸಂದರ್ಭದಲ್ಲಿ ಖಂಡಿತವಾಗಿಯೂ ಜಿದ್ದಾಜಿದ್ದಿ ಇರುತ್ತದೆ. ಆದರೆ, ಅದೇ ರೀತಿ, ಕ್ರೀಡೆಯಲ್ಲಿ ಭಾಗವಹಿಸುವ ಎರಡೂ ದೇಶಗಳ ಯುವಕರು ತಮಗೆ ಸ್ಫೂರ್ತಿಯಾದವರನ್ನು ಹಾಗೂ ನಮ್ಮನ್ನು ಅನುಸರಿಸುತ್ತಿರುವುದು ಉತ್ತಮ ಬೆಳವಣಿಗೆ. ಇದು ತಮ್ಮ ತಮ್ಮ ದೇಶಗಳಿಗೆ ಪದಕಗಳನ್ನು ತಂದುಕೊಡಲಿದೆ’ ಎಂದು ಹೇಳಿದ್ದಾರೆ.

- Advertisement -


ಗುರುವಾರ ತಡ ರಾತ್ರಿ ನಡೆದ ಫೈನಲ್ನಲ್ಲಿ 92.97 ಮೀ. ದೂರ ಚಾವೆಲಿನ್ ಎಸೆಯುವ ಮೂಲಕ ಒಲಿಂಪಿಕ್ಸ್ ದಾಖಲೆಯನ್ನೂ ಬರೆದ ಹರ್ಷದ್, ಇದೇ ಮೊದಲ ಬಾರಿಗೆ ನೀರಜ್ ಎದುರು ಮೇಲುಗೈ ಸಾಧಿಸಿದ್ದಾರೆ. ಇದಕ್ಕೂ ಮೊದಲು ಮುಖಾಮುಖಿಯಾದ 10 ಸಲವೂ ನೀರಜ್ ಅವರೇ ಮಿಂಚಿದ್ದರು. ಭಾರತದ ಅಥ್ಲೀಟ್ ಈ ಬಾರಿ 89.45 ಮೀ. ದೂರ ಎಸೆದು ಬೆಳ್ಳಿಗೆ ಕೊರಳೊಡ್ಡಿದ್ದಾರೆ.



Join Whatsapp