ರಾಜ್ಯದಲ್ಲಿ ಪ್ರವಾಹವಿದೆ, ಕೊವಿಡ್ ಹೆಚ್ಚುತ್ತಿದೆ ಆದರೂ ಸರಕಾರ ಸಚಿವ ಸಂಪುಟದ ಬಗ್ಗೆ ಚಿಂತೆಯಲ್ಲಿದೆ: ಕುಮಾರಸ್ವಾಮಿ

Prasthutha|

ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಲು ಸಿಎಂ ಗೆ ಮನವಿ

- Advertisement -

ಬೆಂಗಳೂರು: ರಾಜ್ಯದಲ್ಲಿ ಪ್ರವಾಹವಿದೆ, ಕೊವಿಡ್ ಹೆಚ್ಚುತ್ತಿದೆ ಆದರೂ ಸರಕಾರ ಸಚಿವ ಸಂಪುಟದ ಬಗ್ಗೆ ಚಿಂತೆಯಲ್ಲಿದೆ. ಕೊವಿಡ್ ಮೂರನೇ ಅಲೆ ಬಗ್ಗೆ ತಜ್ಞರು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿದಿನ 50-100 ಕೊವಿಡ್ ಕೇಸ್ ಹೆಚ್ಚಾಗುತ್ತಿದೆ‌ ಸರಕಾರ ತಕ್ಷಣ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನ ಸೋಮಶೆಟ್ಟಿಹಳ್ಳಿಯಲ್ಲಿ ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ಕೊರೊನಾ 2ನೇ ಅಲೆ ವೇಳೆ ಲಾಕ್‌ಡೌನ್‌ಗೆ ಸಲಹೆ ನೀಡಿದ್ದೆ. ಆಗ ನಿರ್ಲಕ್ಷ್ಯದಿಂದ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಈಗಲಾದರೂ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.

- Advertisement -

ಒಂದೆಡೆ ಕೊರೊನಾ ಹೆಚ್ಚಳ, ಮತ್ತೊಂದೆಡೆ ಪ್ರವಾಹ ಪರಿಸ್ಥಿತಿ. ಇಂತಹ ಸ್ಥಿತಿಯಲ್ಲಿ ಸಚಿವ ಸಂಪುಟ ರಚನೆಯ ಬಗ್ಗೆ ಚಿಂತಿಸುತ್ತಿರುವುದು ರಾಜ್ಯದ ಜನತೆಯ ವಿಪರ್ಯಾಸ. ತಮ್ಮ ಕ್ಷೇತ್ರಗಳಿಗೆ ತೆರಳುವಂತೆ ಶಾಸಕರಿಗೆ ಸಿಎಂ ಸೂಚಿಸಬೇಕು. ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಿಗೆ ಜಿಲ್ಲೆಗಳಿಗೆ ತೆರಳಿ ಕೆಲಸ ಮಾಡುವಂತೆ ಸಿಎಂ ಸೂಚಿಸಬೇಕು. ಕೊರೊನಾ 3ನೇ ಅಲೆ ತಡೆಗೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಹೆಚ್ಡಿಕೆ ಒತ್ತಾಯಿಸಿದ್ದಾರೆ.

2 ವರ್ಷಗಳಿಂದ ಸಿಎಂ ಭೇಟಿಗೆ ಜನಸಾಮಾನ್ಯರಿಗೆ ಅವಕಾಶ ದೊರೆಯುತ್ತಿಲ್ಲ. ಜನಸಾಮಾನ್ಯರು ಕಷ್ಟವನ್ನು ಯಾರೂ ನೇರವಾಗಿ ಕೇಳುತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅದನ್ನು ಸರಿಪಡಿಸಬೇಕಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

Join Whatsapp