ನಟ ಉಪೇಂದ್ರಗೆ ರಿಲೀಫ್: ಎರಡನೇ FIRಗೂ ತಡೆ ನೀಡಿದ ಹೈಕೋರ್ಟ್

Prasthutha|

ಬೆಂಗಳೂರು: ಜಾತಿ ನಿಂದನೆ ಪದ ಬಳಸಿದ ಆರೋಪವನ್ನು ಎದುರಿಸುತ್ತಿದ್ದ ನಟ ಉಪೇಂದ್ರ ಅವರ ವಿರುದ್ಧ ದಾಖಲಾಗಿದ್ದ ಮೊದಲ ಎಫ್ ಐಆರ್ ಗೆ ಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಅದೇ ರೀತಿ ಎರಡನೇ ಎಫ್ ಐಆರ್ ಗೆ ಕೋರ್ಟ್ ತಡೆ ಕೊಟ್ಟಿದೆ.

- Advertisement -

ಕಳೆದ ವಾರ ಪ್ರಜಾಕೀಯದ ಬಗ್ಗೆ ಮಾತನಾಡಲು ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದರು. ಈ ವೇಳೆ ಉಪೇಂದ್ರ ಆಕ್ಷೇಪಾರ್ಹ ಪದಬಳಕೆ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಕೇಸ್ ದಾಖಲಾಯಿತು.

ಅದೇ ರೀತಿ ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ ಕೂಡ ದೂರು ದಾಖಲು ಮಾಡಿದ್ದರು. ಈ ದೂರನ್ನು ಆಧರಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

Join Whatsapp