ಚಾಮರಾಜನಗರ, ಮೈಸೂರು ಡಿಸಿ ಕಚೇರಿ, ಆಸ್ಪತ್ರೆ ದಾಖಲೆಗಳನ್ನು ಸೀಜ್‌ ಮಾಡುವಂತೆ ಹೈಕೋರ್ಟ್‌ ಆದೇಶ

Prasthutha|

ಬೆಂಗಳೂರು: ಚಾಮರಾಜನಗರ, ಮೈಸೂರು ಆಸ್ಪತ್ರೆ, ಡಿಸಿ ಕಚೇರಿಗಳ ದಾಖಲೆಗಳನ್ನು ಸೀಜ್‌ ಮಾಡುವಂತೆ ಹೈಕೋರ್ಟ್‌ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದೆ.

- Advertisement -

ಅಕ್ಸಿಜನ್‌ ಸಿಗದೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಬರೋಬ್ಬರಿ 25ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌ ವಿಭಾಗೀಯ ಪೀಠ, ಚಾಮರಾಜನಗರ, ಮೈಸೂರು ಆಸ್ಪತ್ರೆ, ಡಿಸಿ ಕಚೇರಿಗಳ ದಾಖಲೆಗಳನ್ನು ಸೀಜ್‌ ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ.

ಇದೇ ವೇಳೆ ಪ್ರಕರಣಕ್ಕೆ ಸಂಬಂಧ ತನಿಖಾಧಿಕಾರಿ ಮಾತ್ರ ದಾಖಲೆಗಳನ್ನು ಪರಿಶೀಲನೆ ಮಾಡಬಹುದಾಗಿದೆ ಅಂತ ಹೇಳಿದೆ. ಇದಲ್ಲದೇ ಅಕ್ಸಿಜನ್‌ಗೆ ಸಂಬಂಧಪಟ್ಟಂತೆ ಕೂಡ ದಾಖಲೆಗಳನ್ನು ಸೀಜ್‌ ಮಾಡುವಂತೆ ಆದೇಶ ಹೊರಡಿಸಿದೆ.

Join Whatsapp