ಆಕ್ಸಿಜನ್ ಕೊರತೆ | ಮಂಗಳೂರಿಗೆ ಪ್ರಾಣವಾಯು ಹೊತ್ತು ತಂದ ಬಹ್ರೈನ್ ಹಡಗು

Prasthutha|

ಮಂಗಳೂರು : ದೇಶದಲ್ಲಿ ಕೊರೋನಾ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಸೋಂಕಿನಿಂದ ಜನತೆ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಉಂಟಾದ ಆಕ್ಸಿಜನ್ ಕೊರತೆಗೆ ಬಹರೈನ್ ದೇಶ ಸಹಾಯ ಹಸ್ತ ಚಾಚಿದೆ.

ಈ ಹಿನ್ನೆಲೆಯಲ್ಲಿ ಭಾರತ ಮತ್ತು ಬಹರೈನ್ ನಡುವಿನ ಒಪ್ಪಂದ ಪ್ರಕಾರ ಸಮುದ್ರ ಸೇತು ಯೋಜನೆಯಡಿ ಭಾರತೀಯ ಕರಾವಳಿ ತಟ ರಕ್ಷಣಾ ಪಡೆಯ ಐಎನ್ಎಸ್ ತಲಾವಾರು ಹಡಗಿನ‌ ಮೂಲಕ ಬಹರೈನ್ ನಿಂದ ಮಂಗಳೂರು ಎನ್ಎಂಪಿಟಿಗೆ 60 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿದೆ.

- Advertisement -

ಮೂವತ್ತು ಮೆಟ್ರಿಕ್ ಟನ್ ನ ಎರಡು ಟ್ಯಾಂಕರ್ ಹಡಗಿನ ಮೂಲಕ ಆಕ್ಸಿಜನ್ ಮಂಗಳೂರಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಎಲ್ಲಾ ಹಡಗು ಮತ್ತು ಎನ್ಎಂಪಿಟಿ ಯಲ್ಲಿನ ಕಾರ್ಯಗಳು ಸ್ಥಗಿತಗೊಳಿಸಿ ಸರಕು ನಿರ್ವಹಣೆಯ ಕ್ರೈನ್ ಗಳ ಮೂಲಕ ಆಕ್ಸಿಜನ್ ಟ್ಯಾಂಕರ್ ಇಳಿಸಲಾಗಿದೆ.

- Advertisement -