ಖಾಸಗಿ ಶಾಲೆಗಳ ಫೀಸ್| ವಿನಾಯಿತಿ ಶೇ.30 ಅಲ್ಲ, ಶೇ.15

Prasthutha|

ಬೆಂಗಳೂರು: ಖಾಸಗಿ ಶಾಲೆಗಳಿಗೆ ಬೋಧನಾ ಶುಲ್ಕ ನಿಗದಿ ವಿಚಾರಕ್ಕೆ ಸಂಬಂಧಿಸಿ ಶೇ. 15 ಶುಲ್ಕ ರಿಯಾಯಿತಿಗೆ ಹೈಕೋರ್ಟ್‌ ಆದೇಶ ಹೊರಡಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2020-2021 ನೇ ಸಾಲಿನಲ್ಲಿ ಭೋದನಾ ಶುಲ್ಕವನ್ನ ಕಡಿತ ಮಾಡಿತ್ತು. ಶೇ.30 ರಷ್ಟು ಭೋದನಾ ಶುಲ್ಕ ಕಡಿತ ಮಾಡಿ ಆದೇಶ ಮಾಡಿತ್ತು.

- Advertisement -

ಸರ್ಕಾರದ ಆದೇಶ ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರದ ಅವೈಜ್ಞಾನಿಕ ಆದೇಶ ಎಂದು ಕೋರ್ಟ್ ಮೊರೆ ಹೋಗಿದ್ದು, ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಈಗ ಹೈಕೋರ್ಟ್ ಮತ್ತೊಂದು ಆದೇಶ ಹೊರಡಿಸಿದೆ. 2020-21 ರ ಸಾಲಿಗೆ ಶೇ.15 ರಷ್ಟು ಶುಲ್ಕ ರಿಯಾಯಿತಿಗೆ ಆದೇಶಿಸಿದೆ . ಹೈಕೋರ್ಟಿನ ಈ ಆದೇಶದಿಂದಾಗಿ ಶಿಕ್ಷಣ ಸಂಸ್ಥೆಗಳಿಗೂ ರಿಲೀಫ್ ಸಿಕ್ಕಿದೆ.



Join Whatsapp