ಕೇರಳ: ನರಬಲಿ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

Prasthutha|

- Advertisement -

ತಿರುವನಂತಪುರಂ: ಕೇರಳ ನರಬಲಿ ಪ್ರಕರಣದ ಆರೋಪಿಯು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಮಾಟ-ಮಂತ್ರದ ಉದ್ದೇಶಕ್ಕಾಗಿ ರೋಸ್ಲಿನ್‌ ಮತ್ತು ಪದ್ಮಾ ಎನ್ನುವ ಇಬ್ಬರು ಮಹಿಳೆಯರನ್ನು ಬಲಿ ನೀಡಿದ್ದ ಪ್ರಕರಣದ ಪ್ರಮುಖ ಆರೋಪಿ, ಲೈಲಾ ಭಗವಾಲ್‌ ಸಿಂಗ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬೆಚು ಕುರಿಯನ್‌ ಥಾಮಸ್‌ ತಿರಸ್ಕರಿಸಿದ್ದಾರೆ.

- Advertisement -

ಪ್ರಮುಖ ಆರೋಪಿಯಾದ ಲೈಲಾ ಜತೆಗೆ ಆಕೆಯ ಪತಿ ಭಗ್ವಾಲ್‌ ಸಿಂಗ್‌ ಹಾಗೂ ಮೊಹಮ್ಮದ್‌ ಶಫಿ ಎಂಬಾತ ಸೇರಿ ಮಹಿಳೆಯರನ್ನು ನರಬಲಿ ನೀಡಿದ್ದರು.

Join Whatsapp