ಯಶವಂತಪುರ ರೈಲು ನಿಲ್ದಾಣದ ಡ್ರಮ್‌ನಲ್ಲಿ ಮಹಿಳೆ ಶವ ಪತ್ತೆ

Prasthutha|

ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದ ಆವರಣದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.

- Advertisement -

ರೈಲು ನಿಲ್ದಾಣದ ಆವರಣದಲ್ಲಿದ್ದ ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಅಂದಾಜು 25ರಿಂದ 30 ವರ್ಷ ವಯೋಮಾನದ ಮಹಿಳೆಯ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ.

‘ಮೃತದೇಹಕ್ಕೆ ಪ್ಲಾಸ್ಟಿಕ್‌ ಸುತ್ತಿ ತಂದು ಹಾಕಲಾಗಿದೆ. ಡಿಸೆಂಬರ್‌ 26ರಿಂದ ಇರುವ ಎಲ್ಲ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಲಾಗಿದೆ. ಯಾವುದೇ ಸುಳಿವು ಪತ್ತೆಯಾಗಿಲ್ಲ’ ಎಂದು ರೈಲ್ವೆ ಎಸ್‌ಪಿ ತಿಳಿಸಿದ್ದಾರೆ.

Join Whatsapp