ದೇಶದ ಸ್ವಾತಂತ್ರ್ಯಕ್ಕಾಗಿ ಗ್ಯಾಲನ್ ಗಟ್ಟಲೆ ನೆತ್ತರು ಸುರಿದಿದ್ದೇವೆ, ದೇಶದ ಆಸ್ತಿಯನ್ನು ಅನುಭವಿಸುವ ಹಕ್ಕಿದೆ: ಕೆ.ಅಶ್ರಫ್

Prasthutha|

ಮಂಗಳೂರು: ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರತೀ ಮುಸ್ಲಿಮ್ ತಾಯಿಯಂದಿರು ತಮ್ಮ ಮಕ್ಕಳನ್ನು ದಾನ ನೀಡಿದ್ದಾರೆ. ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಸ್ಲಿಮರು ಗ್ಯಾಲನ್ ಗಟ್ಟಲೆ ರಕ್ತವನ್ನು ಸುರಿದಿದ್ದೇವೆ. ಈ ದೇಶದ ಮಣ್ಣಿನಲ್ಲಿ ಮುಸ್ಲಿಮ್ ಹೋರಾಟಗಾರರ ನೆತ್ತರಿನ ಸೊಗಡು ಅಡಗಿದೆ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಈ ದೇಶದ ಆಸ್ತಿಯನ್ನು ಅನುಭವಿಸುವ ಹಕ್ಕು ಈ ದೇಶದ ಪ್ರತಿಯೊಬ್ಬ ಮುಸ್ಲಿಮರಿಗಿದೆ. ಅದನ್ನು ಅನುಭವಿಸುವ ಹಕ್ಕನ್ನು ಯಾರಿಂದಲೋ ಬಿಕ್ಷೆ ಕೇಳಬೇಕೆಂದಿಲ್ಲ. ಅದನ್ನು ಅನುಭವಿಸಿಯೇ ತೀರುತ್ತೇವೆ. ಚುಣಾವಣೆಯಲ್ಲಿ ಹಿನ್ನಡೆ ಅನುಭವಿಸುವ ನಿಟ್ಟಿನಲ್ಲಿ ರಾಜಸ್ತಾನದ ಬನ್ ಸ್ವಾರದಲ್ಲಿ ಮೋದಿ, ಅಲ್ಲಿಯ ಮುಗ್ಧ ಜನರನ್ನು ಮಂಕು ಬೂದಿ ಎರಚಲು ಪ್ರಯತ್ನಿಸಿದ್ದಾರೆ. ಈ ದೇಶದ ಮುಸ್ಲಿಮರಿಗೆ ಇತರರ ತಾಳಿ ಮಾಂಗಲ್ಯದ ಅಗತ್ಯ ಇಲ್ಲ. ಈ ದೇಶದ ಮೊಗಲರು,ನವಾಬರು, ಸುಲ್ತಾನರು, ಕಬೀರರು,ಸೂಫಿ ಸಂತರು ನೀಡಿದ ಕೊಡುಗೆ ಏನು ಎಂದು ಚರಿತ್ರೆ ಓದಿ ತಿಳಿಯಲಿ. ಈ ದೇಶದ ಆಸ್ತಿಯನ್ನು ಅಂಬಾನಿ ,ಅದಾನಿ ಮತ್ತು ಅರೇಬಿಯಾದ ಶೇಖ್ ಗಳಿಗೆ ಮಾರಿದ ಗೃಹ ಸಚಿವರಂತಹ ಹೀನ ಪರಂಪರೆ ಯಂತವರು ಅಲ್ಲ ಈ ದೇಶದ ಸ್ವಾತಂತ್ಯ ಪ್ರೇಮಿ ಮುಸ್ಲಿಮರು ಎಂದು ಮೋದಿ ಅವರು ಅರಿಯುವುದು ಒಳಿತು. ಪ್ರಧಾನಿ ಅವರು ಈ ದೇಶದ ಪ್ರತಿ ಮುಸ್ಲೀಮರಲ್ಲಿ ಕ್ಷಮೆ ಕೇಳಬೇಕಿದೆ ಎಂದು‌ ಹೇಳಿದ್ದಾರೆ.

Join Whatsapp