ಹಥ್ರಾಸ್ ಕೇಸ್ | ಸಿದ್ದೀಕ್ ಕಾಪ್ಪನ್ ಸಹಿತ PFI ಕಾರ್ಯಕರ್ತರ ವಿರುದ್ಧದ ಒಂದು ಪ್ರಕರಣ ಕೈಬಿಟ್ಟ ಉ.ಪ್ರ. ಪೊಲೀಸರು

Prasthutha|

ಆಗ್ರಾ : ಉತ್ತರ ಪ್ರದೇಶದ ಹಥ್ರಾಸ್ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಸಂದರ್ಭ, ಸಂತ್ರಸ್ತೆಯ ಮನೆಯವರನ್ನು ಭೇಟಿಯಾಗಲು ತೆರಳುತ್ತಿದ್ದ ಪಿಎಫ್ ಐ ಕಾರ್ಯಕರ್ತರೆನ್ನಲಾದ ನಾಲ್ವರ ವಿರುದ್ಧ ದಾಖಲಾಗಿದ್ದ ಎರಡು ಪ್ರಕರಣಗಳಲ್ಲಿ ಒಂದು ಪ್ರಕರಣ ಕೈಬಿಡಲು ಉ.ಪ್ರ. ವಿಶೇಷ ಕಾರ್ಯಾಚರಣೆ ಪಡೆ(ಎಸ್ ಟಿಎಫ್) ಸ್ಥಳೀಯ ನ್ಯಾಯಾಲಯಕ್ಕೆ ಮನವಿ ಮಾಡಿದೆ.

- Advertisement -

ಹಥ್ರಾಸ್ ನ ಚಂದ್ಪಾ ಪೊಲೀಸ್ ಠಾಣೆ ಹಾಗೂ ಮಥುರಾ ಠಾಣೆಯಲ್ಲಿ ನಾಲ್ವರ ದೇಶದ್ರೋಹ, ಯುಎಪಿಎಯಡಿ ಕಠಿಣ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದಾಗ್ಯೂ, ಹಥ್ರಾಸ್ ನ ಚಂದ್ಪಾ ಪೊಲೀಸ್ ಠಾಣೆಯ ಕೇಸ್ ಕೈಬಿಟ್ಟು, ಮಥುರಾದ ಪ್ರಕರಣ ಮಾತ್ರ ಮುಂದುವರಿಯಲಿದೆ.

ಚಂದ್ಪಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ ಐಆರ್ ಅನ್ನು ಮಥುರಾ ಮಾಂತ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐಆರ್ ನೊಂದಿಗೆ ವಿಲೀನ ಮಾಡಲಾಗಿದೆ ಎಂದು ಎಸ್ ಟಿಎಫ್ ತನ್ನ ಅರ್ಜಿಯಲ್ಲಿ ತಿಳಿಸಿದೆ.

- Advertisement -

ದೆಹಲಿಯಲ್ಲಿರುವ ಮಲಯಾಳಂ ಸುದ್ದಿತಾಣದ ಪತ್ರಕರ್ತ ಸಿದ್ದೀಕ್ ಕಾಪ್ಪನ್, ಪಿಎಫ್ ಐ ಕಾರ್ಯಕರ್ತರೆನ್ನಲಾದ ಮುಝಾಫರ್ ನಗರದ ಆತಿಖುರ್ ರಹ್ಮಾನ್, ಬಹ್ರೇಚ್ ನ ಮಸೂದ್ ಅಹ್ಮದ್, ರಾಮ್ ಪುರದ ಆಲಂ ಮುಂತಾದವರ ವಿರುದ್ಧ ಅ.5ರಂದು ಮಥುರಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ದಲಿತ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಕುಟುಂಬಸ್ಥರನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಈ ಕ್ರಮ ಕೈಗೊಳ್ಳಲಾಗಿತ್ತು. ಚಂದ್ಪಾ ಪೊಲೀಸ್ ಠಾಣೆಯ ಅ.4ರ ಪ್ರಕರಣದಲ್ಲೂ ಬಳಿಕ ಅವರ ಹೆಸರನ್ನು ಸೇರಿಸಲಾಗಿತ್ತು.

Join Whatsapp