ಶಾರ್ಜ: ಇನ್ಸಿಟ್ಯೂಷನ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾ, ಅಬುಧಾಬಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಲಪಂಥೀಯ ಪತ್ರಕರ್ತ ಸುಧೀರ್ ಚೌಧರಿಯನ್ನು ಆಹ್ವಾನಿಸಿದ ನಡೆಗೆ ಯುಎಇ ರಾಜಮನೆತನದ ಸದಸ್ಯೆ ರಾಜಕುಮಾರಿ ಹೆಂದ್ ಅಲ್ ಖಾಸಿಮಿ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.
2019 – 2020ರ ಸಾಲಿನ ಸುಧೀರ್ ಚೌಧರಿ ಅವರು ಪೌರತ್ವ ವಿರೋಧಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಮುಸ್ಲಿಮರ ವಿರುದ್ಧ ಝೀ ನ್ಯೂಸ್ ನಲ್ಲಿ ಕಾರ್ಯಕ್ರಮ ನಡೆಸಿದ್ದರು. ಶಾಹೀನ್ ಬಾಗ್, ನವದೆಹಲಿ, ದೇಶದ ಇನ್ನಿತರ ಕಡೆಗಳಲ್ಲಿ ಪೌರತ್ವ ಪ್ರತಿಭಟನೆಯ ನೇತೃತ್ವ ವಹಿಸಿದ್ದಕ್ಕಾಗಿ ಮುಸ್ಲಿಮ್ ವಿದ್ಯಾರ್ಥಿಗಳು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ನಕಲಿ ಕಥೆಗಳನ್ನು ಪ್ರಸಾರಮಾಡಿದ್ದ ಎಂದು ರಾಜಕುಮಾರಿ ಖಾಸಿಮಿ ಶನಿವಾರ ಟ್ವೀಟ್ ಮಾಡಿದ್ದಾರೆ.
ಟಿವಿ ಚರ್ಚೆಗಳ ಮೂಲಕ ಇಸ್ಲಾಮೋಫೋಬಿಯಾವನ್ನು ಹರಡುವುದಕ್ಕಾಗಿ ವ್ಯಾಪಕ ಟೀಕೆಗೊಳಗಾದ ಸುಧೀರ್ ಚೌಧರಿ ಪ್ರಸಕ್ತ ಝೀ ನ್ಯೂಸ್ ನ ಪ್ರಧಾನ ಸಂಪಾದಕರಾಗಿದ್ದಾರೆ ಮತ್ತು ಝೀ ನ್ಯೂಸ್ ನಲ್ಲಿ ಡೈಲಿ ನ್ಯೂಸ್ ಮತ್ತು ಅನಾಲಿಸಿನ್ ಎಂಬ ಪ್ರೈಮ್ ಟೈಮ್ ಶೋವೊಂದನ್ನು ನಿರೂಪಣೆ ಮಾಡುತ್ತಿದ್ದಾರೆ.
ಈ ಮಧ್ಯೆ ಶಾಂತಿಯುತ ದೇಶಕ್ಕೆ ನೀವು ಇಸ್ಲಾಮೋಫೋಬಿಯಾ ಮತ್ತು ದ್ವೇಷವನ್ನು ಯಾಕೆ ಬಿತ್ತುತಿದ್ದೀರಿ ಎಂದು ಹಿಂದ್ ಪ್ರಶ್ನಿಸಿದ್ದಾರೆ.
ಸುಧೀರ್ ಚೌಧರಿ ಎಂಬಾತ ಹಿಂದೂ ಬಲಪಂಥೀಯ ನಿರೂಪಕನಾಗಿದ್ದು, ಭಾರತದ 20 ಕೋಟಿ ಮುಸ್ಲಿಮರನ್ನು ಗುರಿಯಾಗಿಸಿ ಇಸ್ಲಾಮೋಫೋಬಿಯಾ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಪ್ರೈಮ್ ಟೈಮ್ ಶೋಗಳು ದೇಶಾದ್ಯಂತ ಮುಸ್ಲಿಮರ ವಿರುದ್ಧದ ಹಿಂಸಾಚಾರಕ್ಕೆ ನೇರವಾಗಿ ಕೊಡುಗೆ ನೀಡಿವೆ ಎಂದು ಮತ್ತೊಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ರಾಜಕುಮಾರಿ ಖಾಸಿಮಿ ಅವರ ಪ್ರತಿಕ್ರಿಯೆಯನ್ನು ಟ್ವಿಟ್ಟರ್ ನಲ್ಲಿ ಹಲವಾರು ಮಂದಿ ಶ್ಲಾಘಿಸಿದ್ದಾರೆ. ಟಿವಿ ಚರ್ಚೆಗಳು ಮತ್ತು ಟ್ವಿಟ್ಟರ್ ನಲ್ಲಿ ಚೌಧರಿ ಪ್ರದರ್ಶಿಸುವ ಇಸ್ಲಾಮೋಫೋಬಿಯಾದ ಹಿಂದಿನ ನಿದರ್ಶನಗಳನ್ನು ಕೆಲವರು ಹೈಲೈಟ್ ಮಾಡಿದ್ದಾರೆ.
ಈ ಮಧ್ಯೆ ಕಳೆದ ವರ್ಷ ಭಾರತದಲ್ಲಿನ ವಿವಿಧ ‘ಜಿಹಾದ್’ಗಳ ಕುರಿತು ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರ ವಿಶೇಷ ವರದಿಯ ಮೇಲೆ ಭಾರತದಲ್ಲಿನ ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರವು ಝೀ ನ್ಯೂಸ್‌ಗೆ ಸಮನ್ಸ್ ನೀಡಿತ್ತು.