23 ವರ್ಷಗಳ ಬಳಿಕ ಒಮನ್ ನಿಂದ ಮಾಲಕಿಯಾಗಿ ಮರಳಿದ ಸೇವಕಿ

Prasthutha|

ಮಸ್ಕತ್: ಒಮನ್ ನಲ್ಲಿ 23 ವರ್ಷಗಳ ಸೇವೆ ಸಲ್ಲಿಸಿದ ಬಳಿಕ ರಾಣಿ ಅಶೋಕನ್ ಅವರು ಪಶ್ಚಿಮ ಕೇರಳದಲ್ಲಿರುವ ತನ್ನೂರು ವಡಕ್ಕಂಚೇರಿಗೆ ಮಾಲಕಿಯಾಗಿ ವಾಪಾಸಾಗಿದ್ದಾರೆ.
ಒಮನ್ ನಲ್ಲಿ ಭಾರತೀಯರ ನಿವಾಸಿಗಳ ಮನೆಯಲ್ಲಿ ಅಡುಗೆ ಸಹಾಯಕಿಯಾಗಿ ದುಡಿಯುತ್ತಲೇ ಊರಲ್ಲಿ ಒಂದು ಮನೆ ಕಟ್ಟಿಸಿದ ರಾಣಿಯವರು, ಒಬ್ಬಳೇ ಮಗಳನ್ನು ಪದವಿ ಓದಿಸಿ, 360 ಗ್ರಾಂ ಚಿನ್ನದೊಂದಿಗೆ ಮದುವೆ ಮಾಡಿ ಕೊಟ್ಟಿದ್ದಾರೆ.ಆರಂಭದಲ್ಲಿ ರಾಣಿಯ ಗಂಡ ಒಮನ್ ನಲ್ಲಿ ಆಕೆಯೊಂದಿಗೆ ಇದ್ದರು. ಆಮೇಲೆ ತನ್ನ ಮನೆ ಮತ್ತು ಕೋಳಿ ಫಾರ್ಮ್ ನೋಡಿಕೊಳ್ಳುವುದಕ್ಕೆ ಎಂದು ಊರಿಗೆ ವಾಪಾಸಾಗಿದ್ದರು.

- Advertisement -


ತಜ್ಞ ಅಡುಗೆಯಾಳು
1998ರಲ್ಲಿ ಒಮನ್ ಗೆ ಬಂದ ರಾಣಿಯವರು ಸಲಾಲಾದಲ್ಲಿ ಮೊದಲಿಗೆ ಮನೆ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಅನಂತರ ಮಸ್ಕತ್ ಗೆ ಬದಲಿಸಿಕೊಂಡರು. ನಾನು ಒಮನಿಗೆ ಬಂದ ಹೊಸದರಲ್ಲಿ ಹಲವು ಭಾರತೀಯರ ಮನೆಯಲ್ಲಿ ಮನೆ ಸಹಾಯಕಿಯಾಗಿ ಕೆಲಸ ಮಾಡಿದೆ. ನನ್ನನ್ನು ಬೆನ್ನು ನೋವು ಕಾಡ ತೊಡಗಿತು, ಆ ಕಾರಣದಿಂದ ನೆಲ ಒರೆಸುವ, ಕಸ ಗುಡಿಸುವ ಇಂಥ ಕೆಲಸವನ್ನು ಮಾಡುವುದನ್ನು ನಿಲ್ಲಿಸಿದೆ. ಅನಂತರ ನಾನು ಕೆಲಸ ಮಾಡುತ್ತಿದ್ದ ಹೆಚ್ಚಿನ ಮನೆಯವರು ನನ್ನನ್ನು ಅಡುಗೆಗೆ ಸೇರಿಸಿಕೊಂಡರು ಎನ್ನುತ್ತಾರೆ ರಾಣಿ.


ಅವರು ಅಡುಗೆ ಮಾಡಲು ಹೋಗುತ್ತಿದ್ದ ಎಲ್ಲ ಮನೆಗಳು ಮಲೆಯಾಳಿಗಳದ್ದಾಗಿತ್ತು. “ನನ್ನ ಅಡುಗೆ ಸಸ್ಯಾಹಾರಿ, ಮಾಂಸಾಹಾರಿ ಮೆಚ್ಚುಗೆ ಪಡೆಯಿತು. ತೆಂಗಿನಕಾಯಿಯ ಜೊತೆಗೆ ಮಸಾಲೆ ಅರೆದು ನಾನು ಮಾಡುತ್ತಿದ್ದ ಕೋಳಿ ಆಹಾರ ಬಹಳ ಪ್ರಸಿದ್ಧಿ ಪಡೆದಿತ್ತು.” ಹೇಳುತ್ತಾರೆ ರಾಣಿ.
ಕೋವಿಡ್ -19ರ ಹೊಡೆತ ಎರಡು ತಿಂಗಳ ಹಿಂದೆ ರಾಣಿ ಪರೀಕ್ಷೆ ಮಾಡಿಕೊಂಡಾಗ ಕೊರೋನಾ ಪಾಸಿಟಿವ್ ಬಂದಿತ್ತು. ಮೊದಲ ಬಾರಿಗೆ ನಾನು ವಿದೇಶದಲ್ಲಿ ಒಂಟಿಯಾಗಿದ್ದೇನೆ ಎಂದು ನನಗೆ ಅನಿಸತೊಡಗಿತು ಎಂದು ಅಂದಿನ ಏಕಾಂತತೆಯನ್ನು ರಾಣಿ ವಿವರಿಸುತ್ತಾರೆ.

- Advertisement -


“ನಾನು ಅಲ್ಲಿ ಎಲ್ಲರು ಮಾಡುವಂತೆ ಕೆಲವರ ಜೊತೆಗೆ ವಸತಿ, ಸ್ನಾನದ ಮನೆ, ಕಕ್ಕಸು ಹಂಚಿಕೊಂಡಿದ್ದೆ. ಕೋವಿಡ್ ಎಷ್ಟು ಕೆಟ್ಟ ಕಾಯಿಲೆ ಎಂದರೆ ಯಾರೂ ತೊಂದರೆಯನ್ನು ಮೈಗೆಳೆದುಕೊಳ್ಳಲು ತಯಾರಿರಲಿಲ್ಲ. ನನಗೆ ಸೋಂಕಿದ ವೈರಸ್ ಸ್ವಲ್ಪ ಸೌಮ್ಯ ಸ್ವರೂಪದ್ದಾಗಿತ್ತು. ನನ್ನ ರೂಮ್ ಮೇಟ್ ಗಳು ಗಂಜಿ ಇಲ್ಲವೇ ಅನ್ನ ಮಾಡಿ, ತರಕಾರಿ ಸಾಂಬಾರು ಸಹಿತ ರೂಮಿನ ಹೊರಗೆ ಇಡುತ್ತಿದ್ದರು.
ನಾನಾಗ ತುಂಬ ಸುಸ್ತಾದಂತಿದ್ದೆ. ಹಸಿವೆ ಆಗುತ್ತಲೇ ಇರಲಿಲ್ಲ. ಆದರೆ ನನ್ನ ಮಗಳನ್ನು ಮತ್ತು ಗಂಡನನ್ನು ನೋಡಲು ಹೋಗಬೇಕು ಎಂಬ ತುಡಿತ ಎದ್ದಾಗ, ಯಾರಾದರೂ ಎಳೆದು ಉಂಡುಬಿಟ್ಟಾರು ಎನಿಸಿದಾಗ ನಾನೇ ಆಹಾರ ಎಳೆದು ನುಂಗಿ ಬಿಡುತ್ತಿದ್ದೆ. ನನ್ನ ಮಿತ್ರರಿಂದ, ನಾನು ಅಡುಗೆ ಮಾಡುತ್ತಿದದ ಕಡೆಗಳಿಂದ ನಿತ್ಯ ನನಗೆ ಮೆಸೇಜ್ ಗಳು ಬರುತ್ತಿದ್ದವು.


ನನಗೆ ಮೊಬೈಲ್ ಫೋನ್ ಹಿಡಿದುಕೊಳ್ಳಲು ಕೂಡ ಶಕ್ತಿ ಇರಲಿಲ್ಲ. ನನ್ನ ಹಿತಚಿಂತಕರು ನೀಡಿದ ಮಾತ್ರೆ ಮತ್ತು ಟಾನಿಕ್ ಗಳಿಂದ ನಾನು ಎರಡು ವಾರಗಳಲ್ಲಿ ಮೊದಲಿನಂತಾದೆ. ಆಗ ನಾನು ನನ್ನ ದೇಶಕ್ಕೆ ವಾಪಾಸು ಹೋಗುವ ತೀರ್ಮಾನವನ್ನು ಮಾಡಿದೆ. ಆ ಸಮಯ ನನಗೆ ಕೊರೋನಾ ಬಾಧಿಸಿದ ಕಾಲದಲ್ಲಿ ನಾನು ಹಾಗೆ ಮಾಡಿದೆ. ರಾಣಿ ತನ್ನ ತಾಯಿಯನ್ನು ಕೋವಿಡ್ ಸಮಯದಲ್ಲೇ ಕಳೆದುಕೊಂಡರು!
“ನನಗೆ ಪರಿಚಿತರಾಗಿದ್ದ ಮಸ್ಕತ್ ನಲ್ಲಿದ್ದ ಒಳ್ಳೆಯ ವಿದ್ಯಾವಂತರು ನನಗೆ ಎಲ್ಲ ರೀತಿಯಿಂದಲೂ ಸಹಾಯ ಮಾಡುವುದಾಗಿ ಹೇಳಿದರು. ಅದು ಎಲ್ಲ ಆಯಿತು. ಮುಂದೆ ನಾನು ಒಂದು ಹೋಮ್ ಸ್ಟೇ ಆರಂಭಿಸಬೇಕು ಎಂದಿದ್ದೇನೆ, ಒಂದು ದೊಡ್ಡ ಫಾರ್ಮ್ ಹೌಸ್ ಹೊಂದಬೇಕು ಎಂದುಕೊಂಡಿದ್ದೇನೆ, ಅವೆಲ್ಲ ಮುಂದಿನ ದಿನಗಳಲ್ಲಿ ಬಹಳ ಬೇಡಿಕೆಯದಾಗಿರುತ್ತವೆ” ಎಂದು ರಾಣಿ ತನ್ನ ಆಶಯ ಮುಂದಿಡುತ್ತಾರೆ.

Join Whatsapp