ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ : ಸುಪ್ರೀಂ ಕೋರ್ಟ್‌ನಲ್ಲಿ ದಾವೆ

Prasthutha|

ಹೊಸದಿಲ್ಲಿ: ಹರಿಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳ ರ್ಯಾಲಿಗಳಲ್ಲಿ ಮುಸ್ಲಿಮ್ ಸಮುದಾಯವನ್ನು ಆರ್ಥಿಕವಾಗಿ ಬಹಿಷ್ಕರಿಸಿ ದಿವಾಳಿ ಎಬ್ಬಿಸುವಂತೆ ಹಾಗೂ ಅವರನ್ನು ಕೊಲ್ಲುವಂತೆ ದ್ವೇಷ ಭಾಷಣವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ಲ್ಲಿ ದಾವೆ ಹೂಡಲಾಗಿದೆ.

- Advertisement -

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಮಂಗಳವಾರ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಅರ್ಜಿಯನ್ನು ಉಲ್ಲೇಖಿಸಿ ಗಮನಸೆಳೆದಿದ್ದಾರೆ.

370ನೇ ವಿಧಿ ರದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದ ವಾದವನ್ನು ಸಿಜೆಐ ನೇತೃತ್ವದ ಸಂವಿಧಾನ ಪೀಠ ಆಲಿಸಿ ಬಳಿಕ ಮಧ್ಯಾಹ್ನ ಬಿಡುವು ಘೋಷಿಸುತ್ತಿದ್ದಂತೆಯೇ ಸಿಬಲ್‌ ಈ ವಿಚಾರ ಪ್ರಸ್ತಾವಿಸಿದ್ದಾರೆ.

- Advertisement -

ಗುರುಗ್ರಾಮದಲ್ಲಿ ಅತ್ಯಂತ ಆತಂಕಕಾರಿಯ ವಿಚಾರ ನಡೆದಿದೆ. ಸಮುದಾಯದ ಜನರ ವಿರುದ್ಧ ತಪ್ಪು ಭಾವನೆ ಮೂಡುವಂಥ ವಾತಾವರಣ ನಿರ್ಮಿಸಲಾಗುತ್ತದೆ ಎಂದು ಹೇಳಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ. ಪತ್ರಕರ್ತರಾದ ಶಾಹೀನ್‌ ಎಂಬವರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ.

Join Whatsapp