ಹಾಸನ: ಸ್ಥಳ ಮಹಜರು ವೇಳೆ ಪ್ರಜ್ವಲ್ ಪರ ಘೋಷಣೆ

Prasthutha|

ಹಾಸನ: ಅಶ್ಲೀಲ ವೀಡಿಯೊ ಪ್ರಕರಣ ಸಂಬಂಧ ಇಂದು ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ಸ್ಥಳ ಮಹಜರಿಗೆ ಹಾಸನಕ್ಕೆ ಕರೆದೊಯ್ಯಲಾದ ವೇಳೆಯಲ್ಲಿ ಪ್ರಜ್ವಲ್ ಪರ ಘೋಷಣೆ ಕೂಗಿದ್ದಾರೆ.

- Advertisement -

ಹಾಸನದ ಸಂಸದರ ನಿವಾಸದಲ್ಲಿ ಸತತ ನಾಲ್ಕು ಗಂಟೆಗಳ ಕಾಲ SIT ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ.

ಹೌದು ಪ್ರಜ್ವಲ ರೇವಣ್ಣ ಅವರನ್ನು SIT ಅಧಿಕಾರಿಗಳು ಹಾಸನ, ಹೊಳೆನರಸೀಪುರಕ್ಕೆ ಇಂಡಬಕರೆದು ತಂದು ಸತತ ನಾಲ್ಕು ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದರು. ಸ್ಥಳ ಮಹಜರು ಪ್ರಕ್ರಿಯೆ ಮುಗಿಸಿ 4 ವಾಹನಗಳಲ್ಲಿ ತೆರಳಿದ ಎಸ್‌ಐಟಿ. ಈ ವೇಳೆ ಪ್ರಜ್ವಲ್ ರೇವಣ್ಣನನ್ನು ಕರೆದೊಯ್ಯುವಾಗ ಬೆಂಬಲಿಗರು ಘೋಷಣೆ ಕೂಗಿದ ಘಟನೆ ಜರುಗಿತು. ಪ್ರಜ್ವಲ್ ಮತ್ತು ಎಚ್ ಡಿ ರೇವಣ್ಣಗೆ ಜೈ ಎಂದು ಬೆಂಬಲಿಗರು ಘೋಷಣೆ ಕೂಗಿದರು.ಪ್ರಜ್ವಲ್ ರೇವಣ್ಣ ಕುಳಿತಿದ್ದ ಎಸ್‌ಐಟಿ ವಾಹನ ಹಿಂಬಾಲಿಸಿ ಘೋಷಣೆ ಕೂಗಿದ್ದಾರೆ.



Join Whatsapp