ಟಿ-20 ವಿಶ್ವಕಪ್‌: ನ್ಯೂಜಿಲೆಂಡ್ ಎದುರು ಅಫ್ಘಾನಿಸ್ತಾನಕ್ಕೆ 84 ರನ್​ಗಳ ಜಯ

Prasthutha|

ಗಯಾನಾ: ಇಲ್ಲಿನ ಪ್ರಾವಿಡೆನ್ಸ್​ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್‌ನ 14ನೇ​ ಪಂದ್ಯದಲ್ಲಿ ನ್ಯೂಜಿಲೆಂಡ್​ ಎದುರು ಅಫ್ಘಾನಿಸ್ತಾನ ತಂಡ ಭರ್ಜರಿ ಜಯ ಸಾಧಿಸಿದೆ.

- Advertisement -

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಅಫ್ಘಾನಿಸ್ತಾನ ತಂಡವು ಆರಂಭಿಕ ರಹಮಾನುಲ್ಲಾ ಗುರ್ಬಾಜ್​ (80 ರನ್, 56 ಎಸೆತ, 5 ಬೌಂಡರಿ, 5 ಸಿಕ್ಸರ್), ಇಬ್ರಾಹಿಂ ಜರ್ದಾನ್​ (44 ರನ್, 41 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 159 ರನ್​ಗಳಿಸಿತ್ತು.

160 ರನ್​ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್​ ತಂಡವನ್ನು ಅಫ್ಘಾನಿಸ್ಥಾನ ಬೌಲರ್​ಗಳು 75 ರನ್​ಗಳಿಗೆ ಆಲೌಟ್​ ಮಾಡಿದ್ದಾರೆ. ಈ ಮೂಲಕ ಅಫ್ಘಾನಿಸ್ತಾನ 84 ರನ್​ಗಳ ಭರ್ಜರಿ ಜಯ ಕಂಡಿದೆ.

Join Whatsapp