ಹಾಸನ: ಆಟವಾಡುವಾಗ ಕಾಲು ಜಾರಿ ನಾಲೆಗೆ ಬಿದ್ದು ಬಾಲಕಿ ನೀರುಪಾಲು

Prasthutha|

ಹಾಸನ: ನಾಲೆಯಲ್ಲಿ ಕಾಲುಜಾರಿ ಬಿದ್ದು ಬಾಲಕಿಯೊಬ್ಬಳು ನೀರುಪಾಲಾಗಿರುವ ಘಟನೆ ಹಾಸನದ ಅರಕಲಗೂಡು ತಾಲೂಕಿನ ಮಧುರನಹಳ್ಳಿಯಲ್ಲಿ ನಡೆದಿದೆ.

- Advertisement -


ರೇವಣ್ಣ ಹಾಗೂ ಭಾಗ್ಯ ದಂಪತಿಯ ಮಗಳು ಸುಪ್ರೀತಾ (5) ಮೃತ ಬಾಲಕಿ ಎಂದು ಗುರುತಿಸಲಾಗಿದೆ.


ಶುಕ್ರವಾರ ಕರ್ನಾಟಕ ಬಂದ್ ಹಿನ್ನಲೆ ಶಾಲೆಗೆ ರಜೆ ಇದ್ದದ್ದರಿಂದ ಮಕ್ಕಳೊಂದಿಗೆ ಹಾರಂಗಿ ಬಲದಂಡೆ ನಾಲೆಗೆ ಆಟವಾಡುವಾಡಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.
ಈ ಸಂಬಂಧ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.