ಮೂರು ಸಚಿವರಿಗೆ ಜೀವ ಬೆದರಿಕೆ: ಪತ್ರದಲ್ಲಿ ಏನಿದೆ?

Prasthutha|

ಬೆಳಗಾವಿ: ರಾಜ್ಯದ ಮೂವರು ಸಚಿವರಾದ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಪ್ರೀಯಾಂಕ್ ಖರ್ಗೆ ಅವರ ಹೆಸರನ್ನು ಉಲ್ಲೇಖಿಸಿ ಜೀವ ಬೆದರಿಕೆ ಪತ್ರ ಬರೆಯಲಾಗಿದೆ.

- Advertisement -


ಪತ್ರದಲ್ಲಿ ಏನಿದೆ?
“ನಿಜಗುಣಾನಂದ ನಾನು ಬರೆದಿರುವ ಪತ್ರ ಪ್ರೇಮ ಪತ್ರ ಅಂತಾದರೂ ತಿಳಿ. ಅಥವಾ ಸಾವಿನ ಪತ್ರವಂತಾದರೂ ತಿಳಿ, ನಾನು ನಿನ್ನ ಜತೆ ತಮಾಷೆ ಮಾಡುತ್ತಿಲ್ಲ. ನೀನು ಆಯೋಜಿಸುವ ಪಾಪದ ಕಾರ್ಯಕ್ರಮದಲ್ಲೇ ನಿನ್ನ ಕಣ್ಣೆದುರಿಗೆ ನಿನ್ನ ಸಾವು ಬರುತ್ತೆ. ನೀನು ಮನುಷ್ಯ ರೂಪದಲ್ಲಿರುವ ರಾಕ್ಷಸ. ಹಿಂದೂ ಧರ್ಮ ದೇವತೆಗಳನ್ನು ನಿಂದಿಸುವ ನೀನು ರಾಕ್ಷಸನೇ ಸರಿ. ನಿನ್ನ ಜೀವನದ ಕೊನೆಯ ಘಟ್ಟದಲ್ಲಿ ನೀನು ನಿಂತಿದ್ದಿಯಾ. ನಿನ್ನ ಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲ. ನಿನ್ನಂಥ ದುಷ್ಟ ರಾಕ್ಷಸಿ ಸಂತತಿಯ ಸಂಹಾರವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ” ಎಂದು ಪತ್ರದಲ್ಲಿ ಬರೆಯಲಾಗಿದೆ.


“ಎಸ್.ಜಿ ಸಿದ್ದರಾಮಯ್ಯ, ಕೆ.ಮರುಳಸಿದ್ದಪ್ಪ, ಬರಗೂರು ರಾಮಚಂದ್ರಪ್ಪ, ಭಾಸ್ಕರ್ ಪ್ರಸಾದ್, ಪ್ರೋ.ಭಗವಾನ್,ಪ್ರೋ.ಮಹೇಶ್ ಚಂದ್ರ, ಬಿಟಿ ಲಲಿತಾನಾಯಕ್, ನಟ ಚೇತನ್, ನಟ ಪ್ರಕಾಶರಾಜ್. ಸಚಿವರಾದ ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್ ಹಾಗೂ ಧ್ವಾರಕಾನಾಥ, ದೇವನೂರು ಮಹದೇಪ್ಪ, ಬಿ.ಎಲ್ ವೇಣು, ನೀವು ನಿಮ್ಮ ತಂದೆ ತಾಯಿಗಳಿಗೆ ಹುಟ್ಟಿದ್ದರೆ ಕೇಳುವ ಪ್ರಶ್ನೆಗೆ ಉತ್ತರ ಕೊಡಿ ಎಂದು ಸವಾಲು ಹಾಕಿದ್ದಾನೆ.”

Join Whatsapp