ಹರ್ಷ ಹತ್ಯೆ| ಆರೋಪಿಗಳ ವಿರುದ್ಧ UAPA ಪ್ರಕರಣ ದಾಖಲು

Prasthutha|

- Advertisement -

ಶಿವಮೊಗ್ಗ : ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆಯ ಎಲ್ಲ 10 ಆರೋಪಿಗಳ ವಿರುದ್ಧ ಅಕ್ರಮ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ ) ಅಡಿ ಪೊಲೀಸರು ಹೊಸದಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .

ಶಿವಮೊಗ್ಗ ಜಿಲ್ಲೆಯ ಸೀಗೆಹಟ್ಟಿ ಭಾರತಿ ಕಾಲೊನಿ ಬಳಿ ಫೆ .20 ರ ರಾತ್ರಿ ಹರ್ಷ ಹತ್ಯೆಯಾಗಿದ್ದು,  ನಂತರ ಅವರ ತಾಯಿ ನೀಡಿದ ದೂರಿನ ಅನ್ವಯ 10 ಆರೋಪಿಗಳ ವಿರುದ್ಧ ಸಂಚು ರೂಪಿಸಿ , ಕೊಲೆ ಮಾಡಿರುವ ಪ್ರಕರಣ ದಾಖಲಿಸಲಾಗಿತ್ತು . ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು . 11 ದಿನಗಳು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು .

- Advertisement -

“ಹೆಚ್ಚಿನ ತನಿಖೆಗೆ ರಾಷ್ಟ್ರೀಯ ತನಿಖಾ ದಳ ಸೇರಿದಂತೆ ಇತರೆ ಉನ್ನತ ಸಂಸ್ಥೆಗಳಿಗೆ ವಹಿಸಿಕೊಡಲು ಅನುಕೂಲವಾಗುವಂತೆ ಹೊಸದಾಗಿ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಗೃಹ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ .

Join Whatsapp