ರಾಯಚೂರು: ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸವರ್ಣೀಯರು!

Prasthutha|

- Advertisement -

►ಪೊಲೀಸ್ ಇಲಾಖೆಯ ವೈಫಲ್ಯದ ವಿರುದ್ಧ ವ್ಯಾಪಕ ಆಕ್ರೋಶ

ಲಿಂಗಸುಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಹೊಬಳಿಯ ರಾಮತ್ನಾಳ ಗ್ರಾಮದಲ್ಲಿ ಹಾಗೂ ಹಟ್ಟಿಚಿನ್ನದ ಗಣಿ ಹೋಬಳಿಯ ತವಗ ಗ್ರಾಮದಲ್ಲಿ ಸವರ್ಣೀಯರು ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.

- Advertisement -

 ಘಟನೆ ಬೆಳಕಿಗೆ ಬಂದರೂ ಯಾವ ಅಧಿಕಾರಿಗಳೂ ಕೂಡ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡದೆ ಬೇಜವಾಬ್ದಾರಿತನದಿಂದ ವರ್ತಿಸಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ತಾಲ್ಲೂಕಿನಲ್ಲಿ ಈಗಾಗಲೆ ಕಳೆದ ಎರಡು ತಿಂಗಳ ಹಿಂದೆ ಕಿಲ್ಲಾರಟ್ಟಿ ಗ್ರಾಮದಲ್ಲಿ ಬೈಲಪ್ಪನ ಪ್ರಕರಣ ಮಾಸುವ ಮುನ್ನವೇ ಮತ್ತೆ ಅಂತಹದೆ ಘಟನೆ ತಾಲ್ಲೂಕಿನ ಮುದಗಲ್ ಹೊಬಳಿಯ ರಾಮತ್ನಾಳ ಗ್ರಾಮದಲ್ಲಿ ನಿನ್ನೆ ಬೆಳಿಗ್ಗೆ ದಲಿತರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಹಾಗೂ ಹಟ್ಟಿಚಿನ್ನದ ಗಣಿ ಹೋಬಳಿಯ ತವಗ ಗ್ರಾಮದಲ್ಲಿ ಕೂಡ ದಲಿತರ ಮೇಲೆ ಹಲ್ಲೆ ನಡೆದಿದೆ. ಇಷ್ಟೆಲ್ಲಾ ಘಟನೆ ಬೆಳಕಿಗೆ ಬಂದರು ಯಾವ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡದೆ ಬೇಜವಾಬ್ದಾರಿತನದಿಂದ ಅಧಿಕಾರ ನಡೆಸುತ್ತಿದ್ದಾರೆ ಎಂದು ದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಆರೋಪಿಸಿದ್ದಾರೆ.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ದಲಿತರ ಮೇಲೆ ನಿರಂತರ ಮಾರಣಾಂತಿಕ ಹಲ್ಲೆ, ಜಾತಿ ನಿಂದನೆ ಪ್ರಕರಣಗಳು ನಡೆಯುತ್ತಿದ್ದರೂ, ಇಲ್ಲಿನ ಅಧಿಕಾರಿಗಳು ದೌರ್ಜನ್ಯ ನಡೆದ ಗ್ರಾಮಗಳಿಗೆ ಭೇಟಿ ನೀಡದೆ ನಿರ್ಲಕ್ಷ್ಯ ತೋರಿದ ಘಟನೆ ಬೆಳಕಿಗೆ ಬಂದಿದೆ.  ರಾಮತ್ನಾಳ ಹಾಗೂ ತವಗ ಗ್ರಾಮದಲ್ಲಿದೌರ್ಜನ್ಯ ನಡೆದು 24 ಗಂಟೆ ಕಳೆದರೂ, ಗ್ರಾಮಕ್ಕೆ ಭೇಟಿ ನೀಡದೆ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿದ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು, ಅಧಿಕಾರಿಗಳ ಅಸಡ್ಡೆಯಿಂದ ದಲಿತರ ರಕ್ಷಣೆ ಮಾಡಲು ಆಡಳಿತ ವಿಫಲವಾಗಿದೆ. ಮುದಗಲ್ ಹೊಬಳಿಯರಾಮತ್ನಾಳ ಗ್ರಾಮದಲ್ಲಿ ನಡೆದ ಘಟನೆಗಳು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಮುದಗಲ್ ದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಘಟನೆ ನಡೆಯುವ ಮುಂಚೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸೂಕ್ತ ಬಂದೊಬಸ್ತ್ ನೀಡದೆ ಕೈ ಚೆಲ್ಲಿ ಕುಳಿತು ಕೊಂಡಿದ್ದಾರೆ ಎಂದು DSS ಕಾದ್ರೊಳ್ಳಿ ಬಣ್ಣ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹಂಪನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp