ಉಡುಪಿಯಲ್ಲಿ “ಸಾಮರಸ್ಯ ನಡಿಗೆ, ಸಹಬಾಳ್ವೆಯ ಕಡೆಗೆ” ಸಮಾವೇಶಕ್ಕೆ ಚಾಲನೆ

Prasthutha|

ಉಡುಪಿ: ರಾಜ್ಯದಲ್ಲಿನ ಶಾಂತಿ, ಸೌಹಾರ್ದತೆಯ ವಾತಾವರಣವನ್ನು ಕಲುಷಿತಗೊಳಿಸಿ, ಧರ್ಮ ವೈಷಮ್ಯವನ್ನು ಮುನ್ನೆಲೆಗೆ ತಂದು ಈ ದೇಶವನ್ನು ಅವನತಿಯತ್ತ ತೆಗೆದುಕೊಂಡು ಹೋಗುತ್ತಿರುವ ಪ್ರಯತ್ನವನ್ನು ವಿಫಲಗೊಳಿಸಲು ಬಹುತ್ವ ಕರ್ನಾಟಕದ ಶನಿವಾರ ಉಡುಪಿಯ ಅಜ್ಜರಕಾಡಿನಲ್ಲಿ ಹಮ್ಮಿಕೊಂಡಿರುವ ಸಾಮರಸ್ಯ ಸಮಾವೇಶಕ್ಕೆ ಚಾಲನೆ ದೊರೆತಿದೆ.

- Advertisement -

ದಲಿತರು, ರೈತರು, ಕಾರ್ಮಿಕರು, ಬುದ್ಧಿಜೀವಿಗಳು ಮೊದಲಾದವರ ಕೂಡಿಕೆಯಲ್ಲಿ ಸಾಮರಸ್ಯದ ನಡಿಗೆ ನಡೆಯಿತು.

- Advertisement -

ರೈತ ನಾಯಕ ಚಾಮರಸ ಮಾಲಿ ಪಾಟೀಲ್, ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್, ಅನುಪಮ ಪತ್ರಿಕೆ ಸಂಪಾದಕಿ ಸಬಿಹಾ, ನೀಲಾ ಮೊದಲಾದವರು ಮಾತನಾಡಿದರು.

ದ್ವೇಷಕ್ಕೆ ಪ್ರೀತಿಯಿಂದ ಉತ್ತರ ನೀಡುವ ತೀರ್ಮಾನ ಎಲ್ಲರದಾಗಿತ್ತು. ಬಿಜೆಪಿಯು ದ್ವೇಷದ ರಾಜಕಾರಣ ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ  ಎಂದು ಎಲ್ಲರೂ ಬಯಸಿದರು.



Join Whatsapp