ಸೌಹಾರ್ದತೆ,ಸಾಮರಸ್ಯ,ಧರ್ಮ ಸಹಿಷ್ಣುತೆ ನಮ್ಮ ದೇಶದ ತಳಹದಿ; ಮೋದಿ ಆಡಳಿತದಲ್ಲಿ ಆ ತಳಹದಿಯೇ ಕುಸಿಯುತ್ತಿದೆ: ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ದೇಶದಲ್ಲಿ ಹದಗೆಡುತ್ತಿರುವ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕದ ಧಾರ್ಮಿಕ ಆಯೋಗ ವರದಿ ನೀಡಿದೆ. ಭಾರತವನ್ನು ‘ನಿರ್ದಿಷ್ಟ ಕಾಳಜಿ’ಯ ದೇಶದ ಪಟ್ಟಿಗೆ ಸೇರಿಸಲು ವರದಿಯಲ್ಲಿ ಹೇಳಿದೆ. ಇದು ಭಾರತದ ಮಟ್ಟಿಗೆ ಕಪ್ಪು ಚುಕ್ಕೆ. ಈಗ ಹೊರದೇಶಗಳೂ ಕೂಡ ದೇಶದಲ್ಲಿ ಬೆಳೆಯುತ್ತಿರುವ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಬೊಟ್ಟು ಮಾಡಿ ಮಾತಾಡುವಂತಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಅಮೆರಿಕದ ಧಾರ್ಮಿಕ ಆಯೋಗ ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ನೀಡಿರುವ ವರದಿ ಅಂತರಾಷ್ಟ್ರೀಯ ವಲಯದಲ್ಲಿ ದೇಶದ ಮಾನ ಹರಾಜಾದಂತೆ. ಸೌಹಾರ್ದತೆ,ಸಾಮರಸ್ಯ,ಧರ್ಮ ಸಹಿಷ್ಣುತೆ ನಮ್ಮ ದೇಶದ ತಳಹದಿ. ಮೋದಿ ಆಡಳಿತದಲ್ಲಿ ಆ ತಳಹದಿಯೇ ಕುಸಿಯುತ್ತಿದೆ. ಮೋದಿಯವರ ಫ್ಯಾಸಿಸ್ಟ್ ಮಾದರಿಯ ಆಡಳಿತದಿಂದ ಇಂದು ಭಾರತ ಹೊರದೇಶಗಳೆದುರು ತಲೆ ತಗ್ಗಿಸಬೇಕಿದೆ ಎಂದು ಹೇಳಿದರು.

‘ನಮ್ಮದು ಸರ್ವಧರ್ಮ ಸಮಭಾವ’ ಎಂದು ಬೊಬ್ಬಿರಿದುಕೊಳ್ಳುವ C.T.ರವಿಯವರು ಅಮೆರಿಕದ ಧಾರ್ಮಿಕ ಆಯೋಗದ ವರದಿಯ ಬಗ್ಗೆ ಏನು ಹೇಳುತ್ತಾರೆ? ನಿರ್ದಿಷ್ಟವಾಗಿ ಒಂದು ಧರ್ಮವನ್ನು ದ್ವೇಷಿಸುತ್ತಾ ವಿಷ ಕಾರುವುದು ಸರ್ವಧರ್ಮ ಸಮಭಾವವೇ? ದೇಶವನ್ನು ಕಟ್ಟಬೇಕಿರುವುದು ಸಾಮರಸ್ಯದಿಂದ. ಧರ್ಮದ್ವೇಷದಿಂದ ದೇಶ ಕಟ್ಟಿದ ಉದಾಹರಣೆ ಇಡೀ ಜಗತ್ತಿನಲ್ಲಿದೆಯೆ? ಎಂದು ಪ್ರಶ್ನಿಸಿದರು.



Join Whatsapp