ಇಂಡಿಗೋ ಸಿಬ್ಬಂದಿಗೆ ಕಿರುಕುಳ, ಮುಂಬೈಯಲ್ಲಿ ಸ್ವೀಡಿಶ್ ವ್ಯಕ್ತಿಯ ಬಂಧನ

Prasthutha|

ಮುಂಬೈ: ಬ್ಯಾಂಕಾಕಿನಿಂದ ಮುಂಬೈಗೆ ಬರುವ ಇಂಡಿಗೋ ವಿಮಾನದಲ್ಲಿ ಕುಡಿತ ಮತ್ತಿನಲ್ಲಿ ವಿಮಾನದ ಕ್ಯಾಬಿನ್ ಸಿಬ್ಬಂದಿ ಜೊತೆ ಕೆಟ್ಟದಾಗಿ ವರ್ತಿಸಿದ 63ರ ಪ್ರಾಯದ ಸ್ವೀಡನ್ ದೇಶದವರೊಬ್ಬರನ್ನು ಮುಂಬೈಯಲ್ಲಿ ಬಂಧಿಸಲಾಗಿದೆ.
ವಿಮಾನಾಧಿಕಾರಿಗಳ ಪ್ರಕಾರ ಕಳೆದ ಮೂರು ತಿಂಗಳುಗಳಲ್ಲಿ ಕೆಟ್ಟ ನಡತೆಗಾಗಿ ಬಂಧಿಸಲ್ಪಟ್ಟ ಎಂಟನೆಯ ಪ್ರಯಾಣಿಕ ಇವರು.
ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ವಿಮಾನ ಸಿಬ್ಬಂದಿಯು ಕ್ಲಾಸ್ ಎರಿಕ್ ಹೆರಾಲ್ಡ್ ಜೋನಾಸ್ ವೆಸ್ಟ್ ಬರ್ಗ್ ಎಂಬ ಆ ಪ್ರಯಾಣಿಕರನ್ನು ಪೊಲೀಸರಿಗೆ ಒಪ್ಪಿಸಿದರು.
ಊಟ ನೀಡಲ್ಪಟ್ಟ ಹೊತ್ತಿನಿಂದ ವಿಮಾನವು ಇಳಿಯುವವರೆಗೂ ಈ ಪ್ರಯಾಣಿಕ ಕೆಟ್ಟದಾಗಿ ಕಿರುಕುಳ ನೀಡುತ್ತಲೇ ಇದ್ದ ಎಂದು ವರದಿಯಾಗಿದೆ. ಒಂದು ಹಂತದಲ್ಲಿ 24ರ ಆ ಸಿಬ್ಬಂದಿ ಕ್ಯಾಪ್ಟನ್’ಗೆ ಹೇಳಿದ್ದರಿಂದ ಅವರು ಕ್ಲಾಸ್’ಗೆ ಎಚ್ಚರಿಕೆಯ ಕೆಂಪು ಕಾರ್ಡ್ ತೋರಿಸಿದರು.

- Advertisement -


“28ಇ ಸೀಟಿನಲ್ಲಿ ಕುಳಿತಿದ್ದ ಆ ವ್ಯಕ್ತಿಯು ಅತಿಯಾಗಿ ಮದ್ಯಪಾನ ಮಾಡಿರುವುದಲ್ಲದೆ ನಾನು ಚಿಕನ್ ಊಟ ಕೊಟ್ಟಾಗ ಮೀನು ಆಹಾರ ಇಲ್ಲವೇ ಎಂದು ಕೇಳಿದ. ಅಲ್ಲಿಂದ ಉದ್ದಕ್ಕೂ ಕಿರುಕುಳ ನೀಡತೊಡಗಿದ. ಪಿಓಎಸ್ ಮೆಷಿನ್’ನಲ್ಲಿ ಪೇಮೆಂಟಿಗೆ ಎಟಿಎಂ ಕಾರ್ಡ್ ಪಡೆಯುವಾಗ ಆತ ನನ್ನ ಕೈ ಹಿಡಿದುಕೊಂಡ. ನಾನು ಕೊಸರಿಕೊಂಡೆ ಹಾಗೂ ಕಾರ್ಡಿನ ಪಿನ್ ಎಂಟ್ರಿ ಮಾಡುವಂತೆ ತಿಳಿಸಿದೆ. ಆಗ ಅವನು ಎದ್ದು ನಿಂತು ಇತರ ಪ್ರಯಾಣಿಕರೆದುರು ನನಗೆ ಲೈಂಗಿಕ ಕಿರುಕುಳ ನೀಡಿದ. ನಾನು ಈತ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾನೆ ಎಂದು ಕೂಗಿಕೊಂಡಾಗ ಆತನು ಬಿಟ್ಟು ಸೀಟಿನಲ್ಲಿ ಕುಳಿತುಕೊಂಡ” ಎಂದು ಆ ಮಹಿಳಾ ಸಿಬ್ಬಂದಿ ದೂರಿದ್ದಾರೆ.


ಆರೋಪಿ ವಕೀಲನು ನಾನು ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ನಡುಗುವುದರಿಂದ ನನ್ನಿಂದ ಏನೂ ಹಿಡಿದುಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ. “ಸಹಾಯವಿಲ್ಲದೆ ಆತನಿಂದ ಏನನ್ನೂ ಹಿಡಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆತ ಸಿಬ್ಬಂದಿಯ ಕೈ ಹಿಡಿದುಕೊಂಡನೇ ಹೋರತು ಉದ್ದೇಶಪೂರ್ವಕವಾಗಿ ಅಲ್ಲ.” ಎಂದು ಹೇಳಿದ್ದಾನೆ ಎನ್ನಲಾಗಿದೆ.



Join Whatsapp