ಪುಣೆ | ‘ಕೋವಿಶೀಲ್ಡ್’ ಲಸಿಕೆ ಉತ್ಪಾದಿಸುವ ಸೆರಂ ಸಂಸ್ಥೆಯ ಕ್ಯಾಂಪಸ್ ನಲ್ಲಿ ಬೆಂಕಿ ದುರಂತ

Prasthutha|

ಪುಣೆ : ಕೋವಿಡ್ 19 ಲಸಿಕೆ ‘ಕೋವಿಶೀಲ್ಡ್’ ತಯಾರಿಸುವ ಪುಣೆಯ ಮಂಜರಿಯಲ್ಲಿರುವ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕ್ಯಾಂಪಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

- Advertisement -

ಮಂಜರಿ ಕ್ಯಾಂಪಸ್ ನ ಹೊಸ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದಾಗ್ಯೂ ಕಟ್ಟಡವು ‘ಕೋವಿಶೀಲ್ಡ್’ ತಯಾರಿಸುತ್ತಿರುವ ಘಟಕಕ್ಕೆ ನೇರವಾಗಿ ಸಂಪರ್ಕಕ ಹೊಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಹತ್ತಿಕೊಂಡ ವೇಳೆ, ಬಹುತೇಕ ಜನರನ್ನು ಹೊರಗೆ ಕರೆತರಲಾಗಿದೆ. ನಾಲ್ಕು ಜನರು ಮಾತ್ರ ಸಿಲುಕಿಕೊಂಡಿದ್ದು. ಅವರಲ್ಲಿ ಮೂವರನ್ನು ರಕ್ಷಿಸಲಾಗಿದೆ. ನಾಲ್ಕನೇ ವ್ಯಕ್ತಿಯನ್ನೂ ಸುರಕ್ಷಿತವಾಗಿ ಹೊರತರಲು ಪ್ರಯತ್ನಗಳು ನಡೆದಿವೆ ಎಂದು ಅಗ್ನಿಶಾಮಕ ದಳ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp