ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

Prasthutha|

ಜೆರುಸಲೇಂ: ಒತ್ತೆಯಾಳಾಗಿ ಇರಿಸಿಕೊಂಡಿದ್ದ ಇಬ್ಬರು ಅಮೆರಿಕನ್ ಪ್ರಜೆಗಳನ್ನು ಹಮಾಸ್ ಸಶಸ್ತ್ರ ವಿಭಾಗ ಇಝ್ ಎಲ್-ದೀನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಇಬ್ಬರು ತಾಯಿ ಮತ್ತು ಮಗಳೆಂದು ತಿಳಿದುಬಂದಿದೆ.

- Advertisement -

ಮಾನವೀಯ ಆಧಾರದ ಮೇಲೆ ಹೀಗೆ ಮಾಡಲಾಗಿದೆಯೆಂದು ಮತ್ತು ಕತಾರ್ನ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವುದಾಗಿ ಕಸ್ಸಾಮ್ ಬ್ರಿಗೇಡ್ಸ್ ವಕ್ತಾರ ಅಬು ಉಬೈದಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲಿ ವಿದೇಶಾಂಗ ಸಚಿವಾಲಯದ ಪ್ರಕಾರ ಇಬ್ಬರು ಅಮೆರಿಕನ್ ಪ್ರಜೆಗಳನ್ನು ಹಮಾಸ್ ರೆಡ್ಕ್ರಾಸ್ಗೆ ಸಂಸ್ಥೆಗೆ ಹಸ್ತಾಂತರ ಮಾಡಿದೆ. ಅಲ್ಲಿಂದ ತಾಯಿ ಮಗಳನ್ನು ಸೆಂಟ್ರಲ್ ಇಸ್ರೇಲ್ನಲ್ಲಿರುವ ಸೇನಾ ನೆಲೆಗೆ ಕರೆದೊಯ್ಯಲಾಗಿದೆ.