ಮಂಗಳೂರು: ಸಿಟಿಗೋಲ್ಡ್ ವತಿಯಿಂದ ಹಜ್ಜ್, ಉಮ್ರಾ ತರಬೇತಿ ಶಿಬಿರ

Prasthutha|

ಮಂಗಳೂರು: ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಸಿಟಿಗೋಲ್ಡ್ ವತಿಯಿಂದ ಹಜ್ಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಇಂದು (ಮೇ 15, ಸೋಮವಾರ) ಹಜ್ಜ್ ಮತ್ತು ಉಮ್ರಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.

- Advertisement -

ಬಪ್ಪಲಿಗೆ ಜುಮಾ ಮಸ್ಜಿದ್ ಖತೀಬರಾದ ಹಾಜಿ ಸಿರಾಜುದ್ದೀನ್ ಫೈಝಿ ಯಾತ್ರಾರ್ಥಿಗಳಿಗೆ ಹಜ್ಜ್ ವಿಧಿ-ವಿಧಾನಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ಹಾಗೂ ಪ್ರಾತ್ಯಕ್ಷಿಕೆ ಮೂಲಕ ವಿವರಣೆಯನ್ನು ನೀಡಿದರು.

ಮಂಗಳೂರಿನ ಕಂಕನಾಡಿಯಲ್ಲಿರುವ ಜಂಇಯತುಲ್-ಫಲಾಹ್ ಸಭಾಂಗಣದಲ್ಲಿ ಬೆಳಿಗ್ಗೆ 9:30 ರಿಂದ 1:00 ರವರೆಗೆ ನಡೆದ ಶಿಬಿರದಲ್ಲಿ ನೂರಾರು ಮಂದಿ ಭಾಗವಹಿಸಿ ಸದುಪಯೋಗವನ್ನು ಪಡೆದರು.

Join Whatsapp