‘ದಿ ಕೇರಳ ಸ್ಟೋರಿ​ 2’ ನಿರ್ಮಾಣಕ್ಕೆ ಚಿತ್ರ ತಂಡ ನಿರ್ಧಾರ| ಇದರಲ್ಲಿ ತೋರಿಸಲಿರುವ ವಿಷಯ ಏನು?

Prasthutha|

ಕಪೋಲಕಲ್ಪಿತ ‘ದಿ ಕೇರಳ ಸ್ಟೋರಿ’ ಸಿನಿಮಾ ದೇಶಾದ್ಯಂತ ಚರ್ಚೆಯಾಗುತ್ತಿದ್ದಂತೆ ‘ದಿ ಕೇರಳ ಸ್ಟೋರಿ​ 2’ ನಿರ್ಮಿಸಲು ಚಿತ್ರದ ತಂಡ ನಿರ್ಧರಿಸಿದೆ.    

- Advertisement -

‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಕೇವಲ ಯುವತಿಯರ ಬ್ರೇನ್​ವಾಶ್​ ಬಗ್ಗೆ ತೋರಿಸಲಾಗಿದೆ. ಆದರೆ ಯುವಕರ ಬ್ರೇನ್​ವಾಶ್​​ ಬಗ್ಗೆ ಯಾಕೆ ತೋರಿಸಿಲ್ಲ ಎಂದು ಹಿಂದುತ್ವ ಸಂಘಟನೆಗಳು ಪ್ರಶ್ನೆ ಎತ್ತಿದೆ.  ನಿರ್ದೇಶಕ ಸುದೀಪ್ತೋ ಸೇನ್​ ಅವರನ್ನು ಈ ಕುರಿತು ಕೆಲವರು ಪ್ರಶ್ನಿಸಿದ್ದಾರಂತೆ. ಯುವಕರನ್ನು ಬ್ರೇನ್​ವಾಶ್​ ಮಾಡಿದ್ದರ ಕುರಿತು ಸೀಕ್ವೆಲ್​ ಮಾಡುವಂತೆ ಅವರಿಗೆ ಆಫರ್​ ನೀಡಲಾಗಿದೆ. ಹಾಗಾಗಿ ‘ದಿ ಕೇರಳ ಸ್ಟೋರಿ 2’ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

ಅನೇಕ ಕಾರಣಗಳಿಂದಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾ ವಿವಾದ ಸೃಷ್ಟಿ ಮಾಡಿದೆ. ಹಿಂದುತ್ವ ಸಂಘಟನೆಗಳು ಈ ಚಿತ್ರಕ್ಕೆ ಬೆಂಬಲ ಸೂಚಿಸಿದೆ. ಇದೊಂದು ಪ್ರೊಪೊಗಾಂಡ ಸಿನಿಮಾ ಎಂದು ಅನೇಕರು ಟೀಕಿಸಿದ್ದಾರೆ.

Join Whatsapp