ಶೀಘ್ರದಲ್ಲೇ ಹಜ್ 2021 ಅಧಿಕೃತ ಘೋಷಣೆ: ಸೌದಿ ಹಜ್ ಸಚಿವಾಲಯ

Prasthutha|

ಮಕ್ಕಾ: ಶೀಘ್ರದಲ್ಲೇ ಈ ವರ್ಷದ ಹಜ್ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಸೌದಿಯ ಹಂಗಾಮಿ ಸಂವಹನ ಸಚಿವ ಡಾ. ಮಜೀದ್ ಅಲ್-ಖಸಾಬಿ ಹೇಳಿದರು.

- Advertisement -

ರಿಯಾದ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ ಸಚಿವರು, ಜಾಗತಿಕವಾಗಿ ಕೋವಿಡ್ ಸೋಂಕು ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ ಹಜ್-ಉಮ್ರಾ ನಿರ್ವಹಿಸುವ ಪ್ರದೇಶದಲ್ಲಿ ಸೇವೆಗಳನ್ನು ಬಲಪಡಿಸುವ ಭಾಗವಾಗಿ ಸಚಿವಾಲಯವು ಈಗಾಗಲೇ ಕೆಲಸವನ್ನು ಪ್ರಾರಂಭಿಸಿದ್ದು, ಹಜ್ ನಿರ್ವಹಿಸುವ ಸಮಯದಲ್ಲಿ ಕೋವಿಡ್ ವೈರಸ್ ಹರಡುತ್ತಿರುವ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಹೇಳಿದ್ದಾರೆ.

ಹಜ್-ಉಮ್ರಾ ಸಚಿವಾಲಯ, ಗೃಹ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯದಂತಹ ವಿವಿಧ ಘಟಕಗಳ ನೇತೃತ್ವದಲ್ಲಿ ಈ ವರ್ಷದ ಹಜ್ ಚಟುವಟಿಕೆಗಳನ್ನು ಸುಗಮವಾಗಿ ನಡೆಸುವ ಬಗ್ಗೆ ಕೆಲಸ ಪ್ರಾರಂಭಿಸಲಾಗಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸಿ ಹಜ್ ನಿರ್ವಹಿಸಲಾಗುವುದು ಎಂದು ಹಜ್ ಸಚಿವಾಲಯ ತಿಳಿಸಿದೆ.

Join Whatsapp