ಕೇಂದ್ರ ಸರ್ಕಾರದ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿರುವುದು ಗಂಭೀರ ವಿಚಾರ: ರಮಾನಾಥ್ ರೈ

Prasthutha|

►ಬಿಟ್ ಕಾಯಿನ್ ಹಗರಣದಲ್ಲಿ ಕರಾವಳಿಯ ರಾಜಕಾರಣಿಗಳು ಇದ್ದಾರೆ

- Advertisement -

ಮಂಗಳೂರು: ಕೇಂದ್ರ ಸರ್ಕಾರದ ಜನ್ ಧನ್ ಖಾತೆ, ಪಿಂಚಣಿ ಯೋಜನೆ, ಗ್ಯಾಸ್ ಸಬ್ಸಿಡಿ, ಬ್ಯಾಂಕ್ ವಹಿವಾಟುಗಳು ಹ್ಯಾಕ್ ಆಗಿರುವುದು ಗಂಭೀರ ವಿಚಾರ ಎಂದು ಮಾಜಿ ಸಚಿವ ರಮಾನಾಥ್ ರೈ ಹೇಳಿದ್ದಾರೆ.


ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನವರ ಪಾತ್ರ ಇದೆ ಎಂದು ಮುಖ್ಯ ಮಂತ್ರಿ ಹೇಳಿದ್ದಾರೆ. ಹಾಗಾದರೆ ಮುಖ್ಯಮಂತ್ರಿಗಳು ಹ್ಯಾಕ್ ಆಗಿರುವುದು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಎಲ್ಲಾ ಪ್ರಕರಣಗಳು ಸಮಗ್ರ ತನಿಖೆ ಆಗಿದೆ. ಆದರೆ ಇದೀಗ ಯಾವುದೇ ತನಿಖೆ ಸಮರ್ಪಕವಾಗಿ ಆಗುತ್ತಿಲ್ಲ. ಕಾಂಗ್ರೆಸ್ ಅಧಿಕಾರದ ವೇಳೆ ಎಂಟು ಪ್ರಕರಣಗಳು ಸಿಬಿಐ ತನಿಖೆ ಮಾಡಿದೆ .ಕೇಂದ್ರ ಸರ್ಕಾರದ ಕೆಲವು ವೆಬ್ ಸೈಟ್ ಗಳು ಹ್ಯಾಕ್ ಆಗಿರುವುದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷರು ಮಾತನಾಡುತ್ತಿಲ್ಲ. ಅವರ ಹೆಸರು ಕೂಡಾ ಮಾಮನಿಯವರ ಪತ್ರದಲ್ಲಿ ಇದೆ. ಪ್ರಭಾವಿ ನಾಯಕರು ಇದರಲ್ಲಿ ಶಾಮಿಲಾಗಿದ್ದಾರೆ ಎಂದು ಹೇಳಿದರು.

- Advertisement -


ಅಲ್ಲದೆ ಮುಖ್ಯ ಆರೋಪಿ ಶ್ರೀಕಿ ಈ ಬಗ್ಗೆ ಮಾಹಿತಿ ನೀಡಿ ಒಪ್ಪಿಕೊಂಡಿದ್ದಾನೆ. ಇವರು ನಾ ಕಾವೂಂಗ ನಾ ಕಾನೆದೂಂಗ ಹೇಳುತ್ತಾರೆ. ಬಿಜೆಪಿ ಹೇಳುವಂತೆ ಭ್ರಷ್ಟಾಚಾರ ವಿರೋಧಿ ಪಕ್ಷ ಎಂಬು ಸುಳ್ಳು. ಯೋಜನೆಗಳ ಕಾಂಟ್ರಾಕ್ಟ್ ದಾರ 40% ಕಮಿಷನ್ ನೀಡಬೇಕು. ನಮ್ಮದು 10 ಪರ್ಸೆಂಟ್ ಸರ್ಕಾರ ಎಂದು ಮೋದಿ ಅವರು ಹೇಳಿದರು. ಬಿಟ್ ಕಾಯಿನ್ ಹಗರಣ ಬಗ್ಗೆ ಸಿಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಬೇಕು. ನಮ್ಮ ಜಿಲ್ಲೆಯ ರಾಜಕಾರಣಿಗಳು ಈ ಹಗರಣದಲ್ಲಿ ಇದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲಿ. ಜನರಿಗೆ ನೈಜತೆಯನ್ನು ಬಿತ್ತರಿಸಲಿ. ತನಿಖೆ ವೇಳೆ ಅಧಿಕಾರದಿಂದ ಕೆಳಗಿಳಿದು ವಿಚಾರಣೆಗೆ ಹಾಜರಾದರೆ ಒಳಿತು ಎಂದು ತಿಳಿಸಿದರು.

Join Whatsapp