ಅಮೇರಿಕಾದಲ್ಲಿ ಮತ್ತೆ ಗುಡುಗಿದ ಗನ್ : ಸಾಮೂಹಿಕ ಹತ್ಯೆಗೆ ನಾಲ್ವರು ಬಲಿ

Prasthutha|

ವಾಷಿಂಗ್ಟನ್:  ವಾರಗಳ ಹಿಂದೆ ಅಮೆರಿಕದ ಟೆಕ್ಸಾಸ್ ನ ಶಾಲೆಯೊಂದಕ್ಕೆ ನುಗ್ಗಿದ್ದ 18 ವರ್ಷದ ಯುವಕನೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿ 19 ಮಕ್ಕಳ ಹತ್ಯೆಗೈದ ಘಟನೆ ನಡೆದ ಬೆನ್ನಲ್ಲೇ ಶಸ್ತ್ರಾಸ್ತ್ರಧಾರಿ ವ್ಯಕ್ತಿಯೊಬ್ಬ ಆಸ್ಪತ್ರೆಯ ಆವರಣದಲ್ಲಿದ್ದ ನಾಲ್ವರನ್ನು ಹತ್ಯೆಗೈದಿರುವ ಘಟನೆ ಬುಧವಾರ  ಓಕ್ಲಾಹೋಮಾದ ಟುಲ್ಸಾದಲ್ಲಿ ನಡೆದಿದೆ.

- Advertisement -

ಟುಲ್ಸಾದಲ್ಲಿರುವ ಸೈಂಟ್ ಫ್ರಾನ್ಸಿಸ್ ಹೆಲ್ತ್ ಸಿಸ್ಟಮ್ ಆಸ್ಪತ್ರೆಯ ಕ್ಯಾಂಪಸ್ ನೊಳಕ್ಕೆ ನುಗ್ಗಿ ಸಾಮೂಹಿಕವಾಗಿ ನಾಲ್ವರನ್ನು ಹತ್ಯೆಗೈದಿದ್ದ ವ್ಯಕ್ತಿಯ ಬಳಿ ರೈಫಲ್ ಮತ್ತು ಹ್ಯಾಂಡ್ ಗನ್ ಹೊಂದಿದ್ದು, ಶೂಟರ್ ಕೂಡಾ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈತ ತನಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವುದಾಗಿ ಟುಲ್ಸಾ ಪೊಲೀಸ್ ಇಲಾಖೆಯು ವರದಿ ಮಾಡಿದೆ.  ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು ಗುಂಡಿನ ದಾಳಿಯ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.



Join Whatsapp