January 19, 2021
ಗುಜರಾತ್ ಗಲಭೆ ಪ್ರಕರಣ | ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್ ಗೆ ಜಾಮೀನು ನೀಡುವಂತೆ ಭಾರತೀಯ ಅಮೆರಿಕನ್ನರ ಒತ್ತಾಯ

ವಾಷಿಂಗ್ಟನ್ : ಗುಜರಾತ್ ನ ಮಾಜಿ ಪೊಲೀಸ್ ಅಧಿಕಾರಿಗೆ ಜಾಮೀನು ನೀಡುವಂತೆ ಭಾರತದ ಸುಪ್ರೀಂ ಕೋರ್ಟ್ ಎ ಅಮೆರಿಕ ಮೂಲದ ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್ ಮತ್ತು ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್ ಒತ್ತಾಯಿಸಿದೆ. ವರ್ಚುವಲ್ ಪತ್ರಿಕಾಗೋಷ್ಠಿ ಮೂಲಕ ಸಂಘಟನೆಯ ಪ್ರಮುಖರು ಈ ಒತ್ತಾಯ ಮಾಡಿದ್ದಾರೆ.
2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾತ್ರದ ಬಗ್ಗೆ ಬೆಳಕು ಚೆಲ್ಲಿದ್ದ ಸಂಜೀವ್ ಭಟ್ ಗೆ ಇದೀಗ ಅಮೆರಿಕದ ಅನಿವಾಸಿ ಭಾರತೀಯರ ಬೆಂಬಲ ದೊರಕಿದೆ.
ಎರಡು ದಶಕಗಳ ಹಿಂದೆ ನಡೆದ ಗಲಭೆಗೆ ಸಂಬಂಧಿಸಿ ಪ್ರಧಾನಿ ಮೋದಿ ಅವರ ಪಾತ್ರದ ಬಗ್ಗೆ ಸಂಜೀವ್ ಭಟ್ ಆಪಾದನೆಗಳನ್ನು ಮಾಡಿದ್ದರು.