ಪೂರ್ವ ಕರಾವಳಿಯ ನಿದ್ದೆಗೆಡಿಸಿದ ‘ಗುಲಾಬ್’ ಚಂಡಮಾರುತ

Prasthutha|

ಬಂಗಾಳ ಕೊಲ್ಲಿ: 100 ಕಿಲೋ ಮೀಟರ್ ವೇಗದ ಗಾಳಿಯೊಡನೆ ಮಳೆ ಗುದ್ದಿನೊಡನೆ ಗುಲಾಬ್ ಚಂಡಮಾರುತವು ದೇಶದ ಪೂರ್ವ ಕರಾವಳಿಗೆ ಅಪ್ಪಳಿಸಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಡಿಶಾದ ಗಂಜಾಂ ಜಿಲ್ಲೆ ಹೆಚ್ಚು ಹಾನಿ ಕಂಡಿದ್ದು 16,000 ಜನರನ್ನು ಸ್ಥಳಾಂತರ ಮಾಡಲಾಗಿದೆ. ನೌಕಾ ಪಡೆ, ರಾಜ್ಯ ಮತ್ತು ರಾಷ್ಟ್ರೀಯ ನಿರ್ವಹಣಾ ದಳಗಳವರು ಪರಿಹಾರ ವ್ಯವಸ್ಥೆಯಲ್ಲಿ ತೊಡಗಿಕೊಂಡಿದೆ.

- Advertisement -

ಆಂಧ್ರದ ಶ್ರೀಕಾಕುಳಂ ಜಿಲ್ಲೆ ಗುಲಾಬ್‌ ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾಗಿದೆ. ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕೆ ನಡೆಸಿದ್ದ ಮೂವರು ಮೃತರಾದರೆ, ಒಬ್ಬರು ನಾಪತ್ತೆಯಾಗಿದ್ದಾರೆ. 1,100 ಜನರನ್ನು ಸ್ಥಳಾಂತರ ಮಾಡಲಾಗಿದೆ. ಪರಿಹಾರ ಶಿಬಿರಗಳಲ್ಲಿ 100ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ಗುಲಾಬ್ ಕಾರಣ ಪಶ್ಚಿಮ ಬಂಗಾಳದ ಹಲವು ಕಡೆ ಮಳೆಯಾಗುತ್ತಿದೆ ನ್ಯೂಟೌನ್ ರಸ್ತೆಗಳುದ್ದಕ್ಕೂ ನೀರು ನಿಂತಿದ್ದು, ಜನರು ರಸ್ತೆಯಲ್ಲಿ ಮೀನು ಹಿಡಿಯುವ ದೃಷ್ಯಗಳೂ ವೈರಲ್ ಆಗಿದೆ.



Join Whatsapp