SDPI ಬೆಂಗಳೂರು ಜಿಲ್ಲಾಧ್ಯಕ್ಷರಾಗಿ ಮುಜಾಹಿದ್ ಪಾಷ ಆಯ್ಕೆ

Prasthutha|

ಬೆಂಗಳೂರು: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಬೆಂಗಳೂರು ಜಿಲ್ಲಾಧ್ಯಕ್ಷರಾಗಿ ಬಿ.ಬಿ.ಎಂ.ಪಿ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮುಜಾಹಿದ್ ಪಾಷ ಆಯ್ಕೆಯಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಎಸ್.ಡಿ.ಪಿ.ಐ ಬೆಂಗಳೂರು ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ 2021-24ರ ಅವಧಿಗೆ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.

- Advertisement -

ಚುನಾವಣಾ ಅಧಿಕಾರಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಅಬ್ದುಲ್ ರಹೀಂ ಪಟೇಲ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.


ಉಪಾಧ್ಯಕ್ಷರುಗಳಾಗಿ ರಮೇಶ್ ಕುಮಾರ್ ಹಾಗೂ ಫಯಾಜ್ ಅಹ್ಮದ್,ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಅಹಮದ್,ಖಜಾಂಚಿಯಾಗಿ ರಾಶಿದ್ ಅಲಿ ಕಾರ್ಯದರ್ಶಿಗಳಾಗಿ ಮೆಹಬೂಬ್ ಪಾಷ, ಅಡ್ವೊಕೇಟ್ ಎಂ.ಕೆ.ಮೇತ್ರಿ, ಅಡ್ವೊಕೇಟ್ ವಿಜಯನ್, ಮುಝಮ್ಮಿಲ್ ಪಾಷ. ಸಮಿತಿ ಸದಸ್ಯರುಗಳಾಗಿ ಅತ್ತರ್ ಉಲ್ಲ ಶರೀಫ್, ಶೇರ್ ಅಲಿ, ಇಸ್ಮಾಯಿಲ್ ಕುವೆಂಪುನಗರ, ಜಾವೇದ್ ಆಝಂ, ಆಸಿಫ್ ಕಾಡುಗೋಡಿ, ಉಮರ್ ಫಾರೂಕ್, ರಾಜೇಶ್, ಮಹಮ್ಮದ್ ಹನೀಫ್ , ಅಡ್ವೊಕೇಟ್ ವಸೀಮ್, ಮೆಹಬೂಬ್ ನೀಲಸಂದ್ರ ಆಯ್ಕೆಯಾಗಿದ್ದಾರೆ.

- Advertisement -

Join Whatsapp