ಪರೀಕ್ಷೆ ಬರೆಯಲು ಮನೆಯಿಂದ ಹೊರಟ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

Prasthutha|

ಗುಜರಾತ್: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಮನೆಯಿಂದ ಹೊರಡುವ ವೇಳೆ ವಿದ್ಯಾರ್ಥಿಯೋರ್ವ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ದಾರುಣ ಘಟನೆ ಗುಜರಾತ್’ನ ನವ್ಸಾರಿ ಜಿಲ್ಲೆಯಲ್ಲಿ ನಡೆದಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿ ಉತ್ಸವ್ ಶಾ [18] ಮೃತ ದುರ್ದೈವಿ. ನವ್ಸಾರಿಯ ವಿದ್ಯಾಕುಂಜ್ ಶಾಲೆಯ ಕಾಮರ್ಸ್ ವಿದ್ಯಾರ್ಥಿಯಾಗಿದ್ದ ಉತ್ಸವ್, ಪರೀಕ್ಷೆ ಬರೆಯಲು ಮನೆಯಿಂದ ಹೊರಡುವ ವೇಳೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಕೂಡಲೇ ತಂದೆ ನರೇಂದ್ರ ಶಾ ಮಗನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉತ್ಸವ್ ಮೃತಪಟ್ಟಿದ್ದಾನೆ.
ಸ್ಟಾಟಿಸ್ಟಿಕ್ಸ್ ಪರೀಕ್ಷೆ ಬರೆಯಲು ರಾತ್ರಿಯಿಡೀ ನಿದ್ದೆ ಬಿಟ್ಟು ಉತ್ಸವ್ ಅಧ್ಯಯನ ಮಾಡಿದ್ದ ಎಂದು ಪೋಷಕರು ಹೇಳಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಅಮಿತ್ ಪ್ರಕಾಶ್ ಯಾದವ್, ಉತ್ಸವ್ವ ಹೃದಯಾಘಾತದಿಂದ ಮೃತಪಟ್ಟಿರುವುದು ವೈದ್ಯರ ಹೇಳಿಕೆಯಿಂದ ತಿಳಿದುಬಂದಿದೆ. ಆದರೆ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ನಿಖರವಾದ ಕಾರಣ ಗೊತ್ತಾಗಲಿದೆ.‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಅವರು ಉದ್ವೇಗಕ್ಕೆ ಒಳಗಾಗಿರುವುದಾಗಿ ಸಂಶಯವಿದೆ ಎಂದಿದ್ದಾರೆ.

Join Whatsapp