ಗಾಂಧಿನಗರ: ಗುಜರಾತ್ ಮೊರ್ಬಿ ತೂಗು ಸೇತುವೆ ಕುಸಿತಗೊಂಡು ದುರಂತ ಸಂಭವಿಸಿದ್ದು, ಇಲ್ಲಿವರೆಗಿನ ಕಾರ್ಯಾಚರಣೆಯಲ್ಲಿ 60 ಮಂದಿ ಸಾವನ್ನಪ್ಪಿದ್ದು ದೃಢವಾಗಿದೆ ಎಂದು ತಿಳಿದು ಬಂದಿದೆ .ಹಾಗೂ ಹಲವರು ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ.
ಈ ತೂಗು ಸೇತುವೆ ಮೇಲೆ 500 ಮಂದಿ ನಿಂತಿದ್ದರು. ಏಕಾ ಏಕಿಯಾಗಿ ಸೇತುವೆ ಕುಸಿದು ಬಿದ್ದಿದೆ ಎನ್ನಲಾಗಿದೆ.
ಮಚ್ಚು ನದಿಗೆ ನಿರ್ಮಿಸಲಾಗಿದ್ದ ಮೊರ್ಬಿ ಸೇತುವೆಯು 2001ರಿಂದೀಚೆಗೆ ಸಾಕಷ್ಟು ಹಾಳಾಗಿತ್ತು ಎನ್ನಲಾಗಿದೆ.
ಸ್ಥಳೀಯರು ಆಗಾಗ ಸೇತುವೆಯನ್ನು ದುರಸ್ತಿ ಮಾಡುತ್ತಲೇ ಬರುತ್ತಿದ್ದರು. ಇದೀಗ ಸಾರ್ವಜನಿಕರು ಸಂಚರಿಸುತ್ತಿರುವ ಹೊತ್ತಿನಲ್ಲೇ ಕುಸಿದು ಬಿದ್ದಿದೆ.
ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ.
ಈ ಬಗ್ಗೆ ಗುಜರಾತ್ ಸಿ ಎಂ ಭೂಪೇಂದ್ರ ಪಟೇಲ್ ಗೆ ಪ್ರಧಾನಿ ಮೋದಿ ಕರೆ ಮಾಡಿ , ಘಟನೆಯನ್ನು ವಿಚಾರಿಸಿ ನೆರವಿನ ಭರವಸೆ ನೀಡಿದ್ದಾರೆ.
ಸದ್ಯ ನೀರುಪಾಲಾದ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.