ಸುಪ್ರೀಂ ಕೋರ್ಟ್: ಇಂದು CAA ವಿರುದ್ಧದ 232 ಅರ್ಜಿಗಳ ವಿಚಾರಣೆ

Prasthutha|

ನವದೆಹಲಿ: ಕೇಂದ್ರ ಬಿಜೆಪಿ ಸರಕಾರ ಜಾರಿಗೆ ತಂದು, ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರಶ್ನಿಸಿರುವ 232 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

- Advertisement -

ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್ . ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಯನ್ನೊಳಗೊಂಡ ಪೀಠವು ಸಿಎಎಗೆ ಸಂಬಂಧಿಸಿದ 232 ಅರ್ಜಿಗಳನ್ನು ಇಂದು (ಅಕ್ಟೋಬರ್ 31) ವಿಚಾರಣೆ ನಡೆಸಲಿದೆ.

ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳು, ಸಿ ಎ ಎ ಸೇರಿದಂತೆ ಸುಮಾರು 240 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ನಿಗದಿಪಡಿಸಿದೆ.

- Advertisement -

ಸುಪ್ರೀಂ ಕೋರ್ಟ್ ಕಲಾಪವು ಒಂಬತ್ತು ದಿನಗಳ ದೀಪಾವಳಿ ರಜೆ ಬಳಿಕ ಇಂದಿನಿಂದ ಪುನರ್ ಆರಂಭಗೊಳ್ಳಲಿದೆ.

Join Whatsapp