ಮೋರ್ಬಿ: ಗುಜರಾತ್ ನ ಮೋರ್ಬಿಯಲ್ಲಿ ನಿರ್ಮಾಣ ಹಂತದಲ್ಲಿರುವ ವೈದ್ಯಕೀಯ ಕಾಲೇಜಿನ ಭಾಗವೊಂದು ಕುಸಿದ ಪರಿಣಾಮ ಕನಿಷ್ಠ 4 ಕಾರ್ಮಿಕರು ಗಾಯಗೊಂಡಿದ್ದಾರೆ.
ಕಟ್ಟಡ ಕುಸಿದ ಸಂದರ್ಭದಲ್ಲಿ ಗಾಯಗೊಂಡ ನಾಲ್ವರು ಕಾರ್ಮಿಕರು ಮೇಲ್ಛಾವಣಿ ಸಿದ್ಧಪಡಿಸುತ್ತಿದ್ದರು. ಈ ಹಂತದಲ್ಲಿ ಸ್ಲಾಬ್ ಕುಸಿದ ಪರಿಣಾಮ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಬ್ಬ ಕಾರ್ಮಿಕ ಅವಶೇಷಗಳಡಿ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.