ಬಂಟ್ವಾಳ: ಅಲ್ ರಹ್ಮಾ ಫೌಂಡೇಷನ್ ತಲಪಾಡಿ-ಬಿ.ಸಿ.ರೋಡ್ ಇದರ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯು ಶುಕ್ರವಾರ ರಾತ್ರಿ ತಲಪಾಡಿ ಮಸೀದಿ ವಠಾರದಲ್ಲಿ ನಡೆಯಿತು.
ತಲಪಾಡಿ ಬದ್ರಿಯ ಜುಮಾ ಮಸೀದಿಯ ಖತೀಬ್ ರಫೀಕ್ ಅಝ್ಹರಿ ಅವರು ದುಆಃ ನೆರವೇರಿಸಿದರು. ಈ ವೇಳೆ ಪ್ರಸ್ತುತ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಇಮ್ತಿಯಾಝ್ ಅಹ್ಮದ್, ಉಪಾಧ್ಯಕ್ಷರಾಗಿ ಆಸಿಫ್ ಆರ್.ಕೆ., ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್, ಜೊತೆ ಕಾರ್ಯದರ್ಶಿಯಾಗಿ ಅನ್ವರ್ ಕೆ.ಎಚ್., ಖಜಾಂಚಿಯಾಗಿ ರಿಯಾಝ್ ಝರಾ ಅವರನ್ನು ಆಯ್ಕೆ ಮಾಡಲಾಯಿತು.
ಲತೀಫ್ ಬಿ.ಸಿ, ಮುಸ್ತಾಕ್ ತಲಪಾಡಿ, ಜಿ.ಪುತ್ತಾಕ, ಶಾಹುಲ್ ಹಮೀದ್, ಮಹಮ್ಮದಲಿ, ಅಶ್ರಫ್ ಬಿ.ಎಂಟಿ, ಅಶ್ರಫ್ ಟೆಂಪೋ, ನವಾಝ್ ಒಎಸ್ಪಿ, ಇರ್ಷಾದ್ ಕೆ.ಎಚ್., ಮುನಾಝ್ ಅವರನ್ನು ಸಮಿತಿ ಸದಸ್ಯರನ್ನಾಗಿ, ಸಲೀಂ ಟಿ.ಎಂ, ಇಸಾಕ್ ಸ್ಟೋರ್, ಸಮೀರ್ ಕೆ.ಎಚ್, ಮುಹಮ್ಮದ್ ಬಾಂಬೆ, ಹಫೀಝ್, ಆರಿಫ್ ಅವರನ್ನು ನಾಮ ನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಇದಿನಬ್ಬ ಅವರು ಅಧ್ಯಕ್ಷತೆ ವಹಿಸಿದ್ದರು. ಹಿಂದಿನ ಸಾಲಿನ ವಾರ್ಷಿಕ ವರದಿಯನ್ನು ಸರ್ವ ಸದಸ್ಯರ ಅನಮತಿಯೊಂದಿಗೆ ಅಂಗೀಕರಿಸಲಾಯಿತು.