ʼಗಂಗಾ ನದಿಯಲ್ಲಿ ಶವಗಳುʼ ಕವನ | ಸಾಹಿತಿಯಿಂದ ʼಅರಾಜಕತೆʼ; ʼಸಾಹಿತ್ಯ ನಕ್ಸಲರುʼ ಎಂದ ಗುಜರಾತ್‌ ಸಾಹಿತ್ಯ ಅಕಾಡೆಮಿ

Prasthutha|

ಅಹಮದಾಬಾದ್‌ : ಉತ್ತರ ಪ್ರದೇಶ ಮತ್ತು ಬಿಹಾರದ ಗಂಗಾನದಿಯಲ್ಲಿ ಕೋವಿಡ್‌ ಸೋಂಕಿತರ ಮೃತದೇಹಗಳು ತೇಲಿಬಂದ ಬಗ್ಗೆ ಕವನ ಬರೆದಿದ್ದ ಗುಜರಾತಿ ಕವಿ ಪಾರುಲ್‌ ಖಾಖರ್‌ ಅವರನ್ನು ಅರಾಜಕತೆ ಹರಡುವವರು ಎಂದು ಗುಜರಾತ್‌ ಸಾಹಿತ್ಯ ಅಕಾಡೆಮಿಯ ಅಧಿಕೃತ ಪ್ರಕಾಶನ ʼಶಬ್ದಸೃಷ್ಟಿʼಯ ಸಂಪಾದಕೀಯದಲ್ಲಿ ಟೀಕಿಸಲಾಗಿದೆ. ಅಲ್ಲದೆ, ಈ ಕವನಗಳ ಬಗ್ಗೆ ಚರ್ಚಿಸಿದವರು ಮತ್ತು ಪ್ರಚಾರ ಮಾಡಿದವರು ʼಸಾಹಿತ್ಯ ನಕ್ಸಲರುʼ ಎಂದು ದೂರಿದೆ.

ಈ ಸಂಪಾದಕೀಯದ ಬರಹವನ್ನು ಅಕಾಡೆಮಿಯ ಅಧ್ಯಕ್ಷ ವಿಷ್ಣು ಪಾಂಡ್ಯ ದೃಢಪಡಿಸಿದ್ದರು. ʼಶವ್‌ ವಾಹಿನಿ ಗಂಗಾʼ ಕವನವನ್ನು ವಿಶೇಷವಾಗಿ ಉಲ್ಲೇಖಿಸಿಲ್ಲವಾದರೂ, ಹಲವು ಭಾಷೆಗಳಿಗೆ ಭಾಷಾಂತರಗೊಂಡಿರುವ ಕವನವನ್ನು ಕುರಿತಾಗಿ ಈ ಲೇಖನ ಎಂಬುದನ್ನು ಅವರು ದೃಢಪಡಿಸಿದ್ದಾರೆ.

- Advertisement -

ಪ್ರತಿರೋಧದ ಹೆಸರಿನ ಈ ಕವಿತೆ ಅರ್ಥಹೀನವಾದುದು. ಕೇಂದ್ರ ಸರಕಾರ ಮತ್ತು ಅದರ ರಾಷ್ಟ್ರೀಯವಾದಿ ಸಿದ್ಧಾಂತವನ್ನು ವಿರೋಧಿಸುವ ಶಕ್ತಿಗಳು ಪದಗಳನ್ನು ದುರ್ಬಳಕೆ ಮಾಡಿಕೊಂಡಿವೆ ಎಂದು ಸಂಪಾದಕೀಯದಲ್ಲಿ ಟೀಕಿಸಲಾಗಿದೆ.

- Advertisement -