ಗುಜರಾರಾತ್ ಪೊಲೀಸರ ಕ್ರೌರ್ಯ । ಪತ್ರಿಕಾಗೋಷ್ಟಿಯಿಂದಲೇ ರೈತ ನಾಯಕ ಯುದುವೀರ್ ಸಿಂಗ್ ಬಲವಂತದ ಬಂಧನ !

Prasthutha|

► ಸರ್ಕಾರದ ಸರ್ವಾಧಿಕಾರಿ ನಡೆಗೆ ವ್ಯಾಪಕ ಆಕ್ರೋಶ
► ವೀಡಿಯೋ ವೀಕ್ಷಿಸಿ

- Advertisement -

ಅಹ್ಮದಾಬಾದ್ : ಕಳೆದ ನಾಲ್ಕು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಆರಂಭವಾಗಿ ಕೃಷಿ ಕಾಯ್ದೆ ಹಿಂಪಡೆಯುವಂತೆ ದೇಶವ್ಯಾಪಿ ಅನ್ನದಾತರ ಹೋರಾಟ ತೀವ್ರಗೊಂಡಿದ್ದು, ಇಂದು ಭಾರತ್ ಬಂದ್ ಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿತ್ತು. ಅನ್ನದಾತರ ಭಾರತ್ ಬಂದ್ ಗೆ ದೇಶವ್ಯಾಪಿ ವ್ಯಾಪಕ ಬೆಂಬಲ ಕೂಡ ವ್ಯಕ್ತವಾಗಿದೆ. ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡದೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.‌ ರೈತರನ್ನು ಹತ್ತಿಕ್ಕುವ ಮುಂದುವರಿದ ಭಾಗವೆಂದೇ ಹೇಳಲಾಗುತ್ತಿರುವ  ಗುಜರಾತ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ರೈತ ನಾಯಕರಾದ ಯುದುವೀರ್ ಸಿಂಗ್ ರನ್ನು ಗುಜರಾತ್ ಪೊಲೀಸರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲೇ ಬಂಧಿಸಿದ್ದಾರೆ. ಅವರು ತಾನು ಪತ್ರಕರ್ತರನ್ನುದ್ದೆಶಿಸಿ ಮಾತನಾಡಿದ ಬಳಿಕ ಬರುವುದಾಗಿ ಹೇಳುತ್ತಿದ್ದರೂ ಬಲವಂತವಾಗಿ ಅವರನ್ನು ಬಂಧಿಸಿ ಕರೆದೊಯ್ಯಲಾಗಿದೆ.

ದೇಶದ ಎಲ್ಲಾ ರಾಜ್ಯಗಳನ್ನು ರೈತರನ್ನು ಹೋರಾಟಕ್ಕೆ ಕರೆತರುವ, ಅವರಲ್ಲಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಂಯುಕ್ತ ಕಿಸಾನ್ ಮೋರ್ಚಾದ ರೈತ ಮುಖಂಡರು ಮಾಡುತ್ತಿದ್ದಾರೆ. ಈ ಹಿನ್ನೆಲೆ ಗುಜರಾತ್‌ನ ಮೊಟೆರಾದ ಹೋಟೆಲ್ ಒಂದರಲ್ಲಿ ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ಕಾರ್ಯದರ್ಶಿ ಯುದುವೀರ್ ಸಿಂಗ್ ಮಾತನಾಡುತ್ತಿದ್ದ ಸಂದರ್ಭ ಯುದುವೀರ್ ಸಿಂಗ್ ರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಗುಜರಾತ್‌ನಲ್ಲಿ ಏಪ್ರಿಲ್ 4-5 ರಂದು ಕಿಸಾನ್ ಮಹಾಪಂಚಾಯತ್‌ಗಳು ಜರುಗಲಿವೆ. ಈ ಕುರಿತು ಸಂಯುಕ್ತ ಕಿಸಾನ್ ಮೋರ್ಚಾ ಪರವಾಗಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಯುದುವೀರ್ ಸಿಂಗ್ ಮತ್ತು ಜೆ.ಕೆ.ಪಟೇಲ್ ಸೇರಿದಂತೆ ಹಲವರನ್ನು ಗುಜರಾತ್ ಸರ್ಕಾರ ಯಾವುದೇ ಮಾಹಿತಿ ನೀಡದೇ ಬಂಧಿಸಿದೆ. “ಗುಜರಾತ್ ಸರ್ಕಾರದ ಸರ್ವಾಧಿಕಾರಿತನ ನೋಡಿ, ಇವರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ” ಎಂದು ಕಿಸಾನ್ ಏಕ್ತಾ ಮೋರ್ಚಾ ಆಗ್ರಹಿಸಿದೆ. ಯದುವೀರ್ ಸಿಂಗ್ ಅವರ ಬಲವಂತದ ಬಂಧನಕ್ಕೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.



Join Whatsapp