ಸೆಕ್ಸ್ ಸಿಡಿ ಹಗರಣ : ರಮೇಶ್ ಜಾರಕಿಹೊಳಿ ವಿರುದ್ಧ FIR ದಾಖಲು

Prasthutha|

►ಸಂಪೂರ್ಣ ದೂರು ಪ್ರತಿ ಮತ್ತು FIR  ಸೆಕ್ಷನ್ ವಿವರಗಳು ಇಲ್ಲಿವೆ

- Advertisement -

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕೊನೆಗೂ FIR ದಾಖಲಾಗಿದೆ.  ಇಂದು ಬೆಳಗ್ಗೆ ವೀಡಿಯೋ ಬಿಡುಗಡೆಗೊಳಿಸಿದ್ದ ಸಿಡಿ ಲೇಡಿ, ತಾನಿಂದು ನನ್ನ ವಕೀಲ ಜಗದೀಶ್ ಗೌಡ ಮೂಲಕ ದೂರು ದಾಖಲಿಸಲಿದ್ದೇನೆ ಎಂದು ಹೇಳಿದ್ದಳು. ಅದರಂತೆ ವಕೀಲ ಜಗದಿಶ್ ಗೌಡ ಅವರು ಕಮಿಷನರ್ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇದೀಗ FIR ದಾಖಲಾಗಿದೆ.

ಐಪಿಸಿ ಸೆಕ್ಷನ್ 376C, 354A, 504, 417, 67A ಐಟಿ ಅಡಿ ಪ್ರಕರಣ ದಾಖಲಾಗಿದೆ. CRPC 164 ಅಡಿಯಲ್ಲಿ ಸಂತ್ರಸ್ತೆ ಯುವತಿಯ  ಪರವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಇದೀಗ ಸಂತ್ರಸ್ತ ಯುವತಿಯ ದೂರಿನ ಹಿನ್ನೆಲೆಯಲ್ಲಿನ FIR ಮೇಲೆ SIT ತನಿಖೆ ನಡೆಸಲಿದೆ ಎನ್ನಲಾಗಿದೆ.

Join Whatsapp