ಲವ್ ಜಿಹಾದ್ ಕಾನೂನಿನ ಸೆಕ್ಷನ್ ತೆಗೆಯಲು ಸಾಧ್ಯವಿಲ್ಲ: ಗುಜರಾತ್ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

Prasthutha|

ಗಾಂಧಿನಗರ: ಲವ್ ಜಿಹಾದ್ ಕಾನೂನಿನ ಕಲಂ 5ರ ಕಾರ್ಯಾಚರಣೆಗೆ ತಡೆ ನೀಡಿರುವ ಹೈಕೋರ್ಟ್ ನ ಆದೇಶವನ್ನು ತಿದ್ದುಪಡಿ ಮಾಡುವಂತೆ ಕೋರಿ ಗುಜರಾತ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಸರ್ಕಾರದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ನ್ಯಾಯಾಲಯ, ಧಾರ್ಮಿಕ ಸ್ವಾತಂತ್ರ್ಯ ತಿದ್ದುಪಡಿ ಕಾಯ್ದೆ 2021 ರ ಸೆಕ್ಷನ್ 5 ರ ಮೇಲಿನ ತನ್ನ ನಿಲುವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿ ಸರ್ಕಾರದ ಅರ್ಜಿಯನ್ನು ವಜಾ ಮಾಡಿದೆ.
ಅಂತರ್ ಧರ್ಮೀಯ ವಿವಾಹಗಳಿಗೆ ಮಾತ್ರ ಧಾರ್ಮಿಕ ಸ್ವಾತಂತ್ರ್ಯದ ತಿದ್ದುಪಡಿ ಕಾಯ್ದೆ 2021 ಅಥವಾ ಲವ್ ಜಿಹಾದ್ ಕಾಯ್ದೆ ಯ ಸೆಕ್ಷನ್ 5 ರ ಮೇಲಿನ ತಡೆ ಪರಿಣಾಮಕಾರಿಯೆಂದು ನ್ಯಾಯಾಲಯ ಹೇಳಿದೆ.

- Advertisement -

ಮುಖ್ಯಮಂತ್ರಿ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರ ಪೀಠದ ಮುಂದೆ ಹಾಜರಾದ ಸರ್ಕಾರದ ಪರ ವಕೀಲರಾದ ಕಮಲ್ ತ್ರಿವೇದಿ ಅವರು ಸೆಕ್ಷನ್ 5 ಮತ್ತು ವಿವಾಹಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಆಗಸ್ಟ್ 19 ರ ಆದೇಶವನ್ನು ನ್ಯಾಯಾಲಯ ಸರಿಪಡಿಸುವಂತೆ ವಾದಿಸಿದರು.

ಲವ್ ಜಿಹಾದ್ ತಡೆ ಕಾಯ್ದೆಯು ಯಾವುದೇ ಆಕರ್ಷಣೆ, ಬಲವಂತವಿಲ್ಲದೆ, ಮೋಸದ ವಿಧಾನಗಳಿಲ್ಲದೆ ಸ್ವಯಂಪ್ರೇರಣೆಯಿಂದ ಮತಾಂತರಗೊಳ್ಳಲು ಬಯಸಿದರೆ ಕೂಡ ಸೆಕ್ಷನ್ 5 ರ ಅನ್ವಯ ತಡೆಹಿಡಿಯುವ ಸಾಧ್ಯತೆಯಿದೆ. ಮಾತ್ರವಲ್ಲದೆ ಈ ಕಾಯ್ದೆ ಪ್ರಕಾರ ಸಾಮಾನ್ಯ ಮತಾಂತರ ಪ್ರಕ್ರಿಯೆಗೆ ಕೂಡ ತಡೆವೊಡ್ಡುತ್ತದೆಯೆಂದು ಅವರು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶರು, ವಿವಾಹವು ಕಾಯ್ದೆ ತಿದ್ದುಪಡಿಗೆ ಮುಂಚಿತವಾಗಿ ಸೆಕ್ಷನ್ 3 ರ ಅಡಿಯಲ್ಲಿರಲಿಲ್ಲ. ಆದರೆ ಈಗ ವಿವಾಹವು ಸೆಕ್ಷನ್ 3 ರ ಅಡಿಯ ವ್ಯಾಪ್ತಿಗೆ ಬರುವುದರಿಂದ ಮದುವೆಯ ಕಾರಣಕ್ಕಾಗಿ ಮತಾಂತರಕ್ಕೆ ಮಾತ್ರ ಸೆಕ್ಷನ್ 5 ರ ಅನುಮತಿಯ ಅಗತ್ಯವಿರುತ್ತದೆ. ನಾವು ಈ ಸೆಕ್ಷನನ್ನು ಮದುವೆಯ ಕಾರಣಕ್ಕಾಗಿ ಮಾತ್ರ ಉಳಿಸಿಕೊಂಡಿದ್ದೇವೆ ಹೊರತು ಇನ್ನಿತರ ಕಾರಣಕ್ಕಾಗಿ ಈ ಸೆಕ್ಷನನ್ನು ಉಪಯೋಗಿಸುತ್ತಿಲ್ಲವೆಂದು ತಿಳಿಸಿದರು.

- Advertisement -